ಆಫ್ಘಾನ್ ಮಹಿಳಾ ಫುಟ್ಬಾಲ್ ಆಟಗಾರರ  ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್, ಸೆ.15- ಅಫ್ಘಾನಿಸ್ತಾನದ 32 ಮಹಿಳಾ ಫುಟ್ಬಾಲ್ ಆಟಗಾರರು ತಾಲಿಬಾನ್‍ಗಳ ಬೆದರಿಕೆಗಳನ್ನು ಎದುರಿ ಸುತ್ತಿದ್ದು, ಅವರನ್ನು ಸ್ಥಳಾಂತರಿಸಲು ಸರ್ಕಾರ ತುರ್ತು ಮಾನವೀಯ ವೀಸಾಗಳನ್ನು ನೀಡಿದ ನಂತರ ಅವರ ಕುಟುಂಬಗಳೊಂದಿಗೆ ಪಾಕಿಸ್ತಾನ ವನ್ನು ತಲುಪಿದೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಜೂನಿಯರ್ ಬಾಲಕಿಯರ ತಂಡಕ್ಕೆ ಸೇರಿದ ಫುಟ್ಬಾಲ್ ಆಟಗಾರರು 2022 ಫಿಫಾ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ಕತಾರ್‍ಗೆ ಪ್ರಯಾಣಿಸಬೇಕಾಗಿತ್ತು. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ತಾಲಿಬಾನ್‍ಗಳಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದರು.

32 ಫುಟ್ಬಾಲ್ ಆಟಗಾರರನ್ನು ಪಾಕಿಸ್ತಾನಕ್ಕೆ ಕರೆತರುವ ಕ್ರಮವನ್ನು ಬ್ರಿಟಿಷ್ ಮೂಲದ ಎನ್‍ಜಿಒ ಫುಟ್ಬಾಲ್ ಫಾರ್ ಪೀಸ್ ಸರ್ಕಾರ ಮತ್ತು ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್ (ಪಿಎಫ್‍ಎಫ್) ಸಹಯೋಗದೊಂದಿಗೆ ಪೇಶಾವರದಿಂದ ಲಾಹೋರ್‍ಗೆ ಕರೆ ತಂದಿದ್ದು, ಅಲ್ಲಿ ಅವರನ್ನು ಪಿಎಫ್‍ಎಫ್ ಪ್ರಧಾನ ಕಚೇರಿ ಯಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ.

Facebook Comments