ಒಡವೆ ಆಸೆಗೆ ಬ್ಯಾರೆಲ್‍ನಲ್ಲಿ ಮುಳುಗಿಸಿ ಮಗು ಜೀವ ತೆಗೆದ ದೊಡ್ಡಮ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

Baby-Killed-----01

ಬೆಳಗಾವಿ, ಆ.26- ಒಡವೆ ಆಸೆಗೆ ದೊಡ್ಡಮ್ಮಳೇ ತನ್ನ ಸಹೋದರಿಯ ಎರಡು ವರ್ಷದ ಮಗುವನ್ನು ಬ್ಯಾರೆಲ್‍ನಲ್ಲಿ ಮುಳುಗಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಕಾಗವಾಡ ತಾಲ್ಲೂಕಿನಲ್ಲಿ ನಡೆದಿದೆ. ಶೇಡಬಾಳ ಗ್ರಾಮದ ಕಾರ್ತೀಕ ಅಲಾಸೆ (2) ದೊಡ್ಡಮ್ಮ ಜಯಶ್ರೀ ಅಲಾಸೆಯಿಂದ ಹತ್ಯೆಯಾದ ನತದೃಷ್ಟ ಕಂದಮ್ಮ.

ಕಾರ್ತೀಕನ ತಂದೆ ರಾಜು ಹಾಗೂ ರೂಪಾ ಆಸ್ಪತ್ರೆಗಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಈ ವೇಳೆ ಕಾರ್ತೀಕ್‍ನನ್ನು ಅಜ್ಜಿ ಹತ್ತಿರ ಬಿಟ್ಟಿ ಹೋಗಿದ್ದು , ಮಗುವನ್ನು ನಿದ್ರೆಗೆ ಜಾರಿಸಿ ಅಜ್ಜಿ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗಿದ್ದರು. ಇದನ್ನೇ ಕಾದು ಕುಳಿತಿದ್ದ ಜಯಶ್ರೀ ಮಗುವನ್ನು ಬ್ಯಾರೆಲ್‍ನಲ್ಲಿ ಮುಳುಗಿಸಿ ಕೊಲೆ ಮಾಡಿ ಮನೆಯಲ್ಲಿದ್ದ ಹಣ, ಒಡವೆ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅಜ್ಜಿ ಮಲಗಿದ್ದ ಮಗು ಕಾಣದೆಇದ್ದಾಗ ಅಕ್ಕ ಪಕ್ಕದ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಮಗು ಪತ್ತೆಯಾಗದಿದ್ದಾಗ ಆಸ್ಪತ್ರೆಗೆ ಹೋಗಿದ್ದ ಮೃತ ಕಾರ್ತೀಕನ ತಂದೆ ತಾಯಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಮಹಾರಾಷ್ಟ್ರದಿಂದ ಬಂದ ತಂದೆ ತಾಯಿ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ನೀರು ತುಂಬಿದ್ದ ಬ್ಯಾರೆಲ್ ಮುಚ್ಚಳಕ್ಕೆ ತೆಗೆದು ನೋಡಿದಾಗ ಮಗು ನೀರಿನಲ್ಲಿ ತೇಲಾಡುತ್ತಿರುವುದು ಕಂಡು ಬಂದಿದೆ.

ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಾಗ ಮಗು ಮೃತಪಟ್ಟಿರುವುದರ ಬಗ್ಗೆ ವೈದ್ಯರೀ ಖಚಿತ ಪಡಿಸಿದ್ದಾರೆ. ಆರೋಪಿ ಜಯಶ್ರೀ ಮನೆಯಲ್ಲಿ ನಾಪತ್ತೆಯಾಗಿರುವುದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.  ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಜಯಶ್ರೀಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕಾಗವಾಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin