ಬೆಂಗಳೂರಲ್ಲಿ ಗೃಹಿಣಿಯ ಕತ್ತು ಕೊಯ್ದು ಕೊಲೆ..!
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಆ.4- ಮನೆಗೆ ನುಗ್ಗಿದ ದುಷ್ಕರ್ಮಿಗಳು ಗೃಹಿಣಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಾರತ್ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಮುನ್ನೇಕೋಳಾಲ ನಿವಾಸಿ ಸಂಧ್ಯಾ (27) ಕೊಲೆಯಾದ ಗೃಹಿಣಿ.
ಸಂಧ್ಯಾ ಅವರ ಪತಿ ನಾಗೇಶ್ ನಿನ್ನೆ ಮನೆಯಲ್ಲಿ ಇರಲಿಲ್ಲ ಊರಿಗೆ ಹೋಗಿದ್ದರು. ಇಬ್ಬರು ಮಕ್ಕಳೊಂದಿಗೆ ಸಂಧ್ಯಾ ಮನೆಯಲ್ಲಿದ್ದರು. ರಾತ್ರಿ ಯಾರೋ ಮನೆಗೆ ನುಗ್ಗಿ ಸಂಧ್ಯಾ ಅವರ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಇವರ ಮನೆಯಿಂದ ಮಗು ಅಳುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಇವರ ಮನೆ ಬಳಿ ಬಂದು ನೋಡಿದಾಗ ಸಂಧ್ಯಾ ಅವರ ಕೊಲೆಯಾಗಿರುವುದು ಕಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಯಾವ ಕಾರಣಕ್ಕಾಗಿ, ಯಾರು ಸಂಧ್ಯಾಳನ್ನು ಕೊಲೆ ಮಾಡಿದ್ದಾರೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
Facebook Comments