ಬೆಂಗಳೂರು : ಕುತ್ತಿಗೆ ಕೊಯ್ದು ಆಟೋ ಚಾಲಕನ ಪತ್ನಿಯ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.11- ಆಟೋ ಚಾಲಕನ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ನಿನ್ನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಭಾಷ್ ನಗರ, ಬಿ ಬ್ಲಾಕ್, 5ನೆ ಕ್ರಾಸ್ ನಿವಾಸಿ ಶಾಹಿನ ತಾಜ್ (40) ಕೊಲೆಯಾಗಿರುವ ಗೃಹಿಣಿ. ಈಕೆ ಆಟೋ ಚಾಲಕ ಚಾಂದ್ಪಾಷ ಎಂಬುವವರ ಪತ್ನಿ.

ಚಾಂದ್ಪಾಷ ನಿನ್ನೆ ಬೆಳಗ್ಗೆ ಆಟೋ ತೆಗೆದುಕೊಂಡು ಹೊರಗೆ ಬಾಡಿಗೆಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ಮನೆಗೆ ವಾಪಸ್ ಬಂದಾಗ ಬಾಗಿಲು ತೆರೆದಿತ್ತು. ಆಗ ಪತ್ನಿ ಮಂಚದ ಮೇಲೆ ಮಲಗಿದ್ದಲ್ಲೇ ಕೊಲೆಯಾಗಿರುವುದು ಗೊತ್ತಾಗಿದೆ. ದುಷ್ಕರ್ಮಿಗಳು ಮನೆಗೆ ನುಗ್ಗಿ ಶಾಹಿನ ತಾಜ್ಳ ಮುಖವನ್ನು ದಿಂಬಿನಿಂದ ಒತ್ತಿ ಉಸಿರುಗಟ್ಟಿಸಿ ನಂತರ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಈ ಕೊಲೆಯನ್ನು ಯಾರು, ಯಾವ ಕಾರಣಕ್ಕಾಗಿ ಮಾಡಿದ್ದಾರೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಶೋಧಕ್ಕೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin