ಮಗನಿಗೆ ಹೆಣ್ಣು ನೋಡುವ ವಿಚಾರಕ್ಕೆ ಶುರುವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Women-Murder

ಬೆಂಗಳೂರು, ಆ.28- ಮಗನಿಗೆ ಹೆಣ್ಣು ನೋಡುವ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದು ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೂಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರಪ್ಪನಪಾಳ್ಯದ ಬಿರಿಯಾನಿಗಲ್ಲಿ ನಿವಾಸಿ ಪಮಿದಬೇಗಂ (45) ಕೊಲೆಯಾದ ನತದೃಷ್ಟೆ.

ಮಗನಿಗೆ ಹೆಣ್ಣು ನೋಡುವ ವಿಚಾರವಾಗಿ ಸಂಜೆ ಪಮಿದಬೇಗಂ ದಂಪತಿ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಈಕೆಯ ಪತಿ ಚಾಕುವಿನಿಂದ ಚುಚ್ಚಿದ್ದಾನೆ.  ಗಂಭೀರ ಗಾಯಗೊಂಡ ಪಮಿದಬೇಗಂ ಅವರನ್ನು ಸಾಗರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರಾದರೂ ಪ್ರಯೋಜನವಾಗದೆ ರಾತ್ರಿ ಮೃತಪಟ್ಟಿದ್ದಾರೆ.  ಘಟನೆ ಬಳಿಕ ಈಕೆಯ ಪತಿ ಪರಾರಿಯಾಗಿದ್ದಾನೆ. ವೃತ್ತಿಯಲ್ಲಿ ಲಾರಿಚಾಲಕನಾಗಿರುವ ಈತನ ಪತ್ತೆಗೆ ಸುದ್ದಗುಂಟೆಪಾಳ್ಯ ಠಾಣೆ ಪೂಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin