ಅಸ್ತಿತ್ವಕ್ಕೆ ಬಂತು ಮಹಿಳಾ ಛಾಯಾಗ್ರಾಹಕರ ಸಂಘ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.19- ರಾಜ್ಯದಲ್ಲಿ ಅನೇಕ ಛಾಯಾಗ್ರಾಹಕರ ಸಂಘಗಳಿದ್ದು, ಎಲ್ಲವೂ ಪುರುಷ ಪ್ರಧಾನವಾಗಿವೆ. ಮಹಿಳೆಯರು ಕೂಡ ಛಾಯಾಗ್ರಾಹಣ ವೃತ್ತಿಯನ್ನು ಅವಲಂಬಿಸಿದ್ದಾರೆ ಈ ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಛಾಯಾಗ್ರಾಹಕರ ಸಂಘವನ್ನು ಕಟ್ಟಲಾಗಿದೆ.

ರಾಜ್ಯದಲ್ಲಿರುವ ಮಹಿಳಾ ಫೋಟೋ ಗ್ರಾಫರ್‍ಗಳು ಹಾಗೂ ವಿಡಿಯೋ ಗ್ರಾಫರ್ ಗಳನ್ನು ಸಂಘಟಿಸುವ ಉದ್ದೇಶದಿಂದ ಕರ್ನಾಟಕ ಮಹಿಳಾ ಫೋಟೋಗ್ರಾಫರ್ ಅಸೋಸಿಯೇಶನ್ ಪ್ರಾರಂಭಿಸಲಾಗುತ್ತಿದ್ದು, ಜೂ.28ರಂದು ತುಮಕೂರು ರಸ್ತೆ ಬಿಐಇಸಿಯಲ್ಲಿ ನಡೆಯಲಿರುವ ಫೋಟೋ ಟುಡೆ-2019 ವಸ್ತು ಪ್ರದರ್ಶನದಲ್ಲಿ ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಇದೇ ಸಂದರ್ಭದಲ್ಲಿ ಇಮೇಜ್ ಆಂಡ್ ಮಲ್ಟಿ ಮೀಡಿಯಾ ಅಕಾಡೆಮಿ ಟ್ರಸ್ಟ್ ವತಿಯಿಂದ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ