ಮತ್ತೊಬ್ಬ ಮಹಿಳಾ ಕಾನ್‍ಸ್ಟೇಬಲ್‍ಗೆ ಪೊಲೀಸ್ ಠಾಣೆಯಲ್ಲೆ ಸೀಮಂತ

ಈ ಸುದ್ದಿಯನ್ನು ಶೇರ್ ಮಾಡಿ

Police--01

ಮೈಸೂರು, ಜು.10- ಪೊಲೀಸ್ ಠಾಣೆಯೆಂದರೆ ಸದಾ ಕಾಲ ಅಪರಾಧದಂತಹ ವಾತಾವರಣ ಇರುತ್ತಿತ್ತು. ಆದರೆ ಇಂದು ನಗರದ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರೊಬ್ಬರಿಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಪೊಲೀಸರೆಂದರೆ ರಕ್ಷಣೆಗೂ ಸೈ , ಸಂಪ್ರದಾಯಕ್ಕೂ ಬದ್ಧ ಎಂಬುದನ್ನು ಈ ಮೂಲಕ ತೋರಿಸಿದ್ದಾರೆ. ಮಹಿಳಾ ಕಾನ್‍ಸ್ಟೇಬಲ್ ರಕ್ಷಿತಾಳಿಗೆ ಠಾಣೆಯ ಸಿಬ್ಬಂದಿ ವರ್ಗದವರೆಲ್ಲಾ ಸೇರಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಹತ್ತು ಹಲವು ಕೆಲಸದ ಒತ್ತಡದ ನಡುವೆಯೇ ಠಾಣೆಯಲ್ಲಿ ಸೀಮಂತ ಕಾರ್ಯ ನೆರವೇರಿಸಿದರು. ಸದಾ ಕೆಲಸದ ಒತ್ತಡದಲ್ಲೇ ನಾವಿರುತ್ತೇವೆ. ರಕ್ಷಿತಾ ಅವರು ರಜೆಯ ಮೇಲೆ ತೆರಳಿದ ನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಠಾಣೆಯಲ್ಲೇ ಅವರಿಗೆ ಶುಭ ಹಾರೈಸಿ ಕಳಿಸಿದ್ದೇವೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ.

Facebook Comments

Sri Raghav

Admin