ವರ್ಕೌಟ್‌ ಮಾಡಿದ ಬಳಿಕ ಈ ಆಹಾರಗಳನ್ನು ಸೇವಿಸಲೇಬಾರದು..!

ಈ ಸುದ್ದಿಯನ್ನು ಶೇರ್ ಮಾಡಿ

ವರ್ಕೌಟ್‌ ಮಾಡಿದ ಬಳಿಕ ಹೆಚ್ಚಿನ ಲಾಭ ಪಡೆಯಬೇಕೆಂದರೆ ಕೆಲವು ಸಂಗತಿಗಳಿಂದ ದೂರ ಉಳಿಯಬೇಕು, ಮತ್ತು ಕೆಲವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜಿಮ್ಗೆ ಹೋಗುತ್ತಿದ್ದರೂ ಸರಿ, ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದರೂ ಸರಿ, ವರ್ಕೌಟ್ ನಂತರ   ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಅಷ್ಟೇ ಮುಖ್ಯ. ಆದ್ರೆ  ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಟರೂ ಶೇಪ್ ಇಲ್ಲದಿರುವುದನ್ನು ಗಮನಿಸಿರುತ್ತೇವೆ.. ಇಂಥ ಸಮಯದಲ್ಲಿ ಆಹಾರ ಸೇವನೆ ಅತಿ ಮುಖ್ಯ.

ತಡವಾಗಿ ಆಹಾರ ಸೇವನೆ: ನಿಜವೆಂದರೆ, ವರ್ಕೌಟ್ ಆದ 30ರಿಂದ 45 ನಿಮಿಷದೊಳಗೆ ಆಹಾರ ಸೇವಿಸಬೇಕು. ಇದರಿಂದ ದೇಹವು ಸ್ನಾಯುಗಳ ರಿಪೇರ್ಗೆ ಬೇಕಾದ ಪೋಷಕಾಂಶಗಳನ್ನು ಸರಿಯಾಗಿ ಉತ್ಪತ್ತಿ ಮಾಡುತ್ತದೆ. ಸ್ಮೂತಿ, ಪ್ರೋಟೀನ್ ಬಾರ್, ಎನರ್ಜಿ ಡ್ರಿಂಕ್, ಬಾಳೆಹಣ್ಣು, ಹಾಲು ಏನಾದರೂ ಸರಿ, ವರ್ಕೌಟ್ ಮುಗಿಯುತ್ತಿದ್ದಂತೆಯೇ ಸೇವಿಸಬೇಕು.

#ಹಸಿ ತರಕಾರಿ: ದೇಹದ ವರ್ಕೌಟ್ ಬಳಿಕ ಹಸಿ ತರಕಾರಿಗಳನ್ನು ತಿನ್ನದಿರಿ. ಆ ವೇಳೆಯಲ್ಲಿ ಹಸಿ ತರಕಾರಿ ನಿಮ್ಮಗೆ ಪೌಷ್ಠಿಕಾಂಶಗಳು ಸೀಗುವುದಿಲ್ಲ. ವರ್ಕೌಟ್ ಬಳಿಕ ಹಸಿ ತರಕಾರಿ ಸೇವಿಸುವ  ಆಹಾರದ ಅಭ್ಯಾಸ ಬೀಡುವುದು ಉತ್ತಮ.

#ನಿದ್ದೆ ಮಾಡದಿರುವುದು: ವರ್ಕೌಟ್ ಮಾಡುವಾಗ ಪ್ರತಿ ರಾತ್ರಿ ಉತ್ತಮ ನಿದ್ರೆ ಅತ್ಯಗತ್ಯ. ನಿದ್ರೆಯ ಆರ್ಇಎಂ ಸ್ಟೇಜ್ನಲ್ಲಿ ಬೆಳಗಿನ ಹೊತ್ತು ಹಾನಿಗೊಂಡ ಸ್ನಾಯು ಹಾಗೂ ಟಿಶ್ಯೂಗಳು ರಿಪೇರ್ ಆಗುತ್ತವೆ. ಅಲ್ಲದೆ, ನಿದ್ರೆ ಸರಿಯಾಗಿ ಆಗಿಲ್ಲವಾದರೆ ಸುಸ್ತಿನಿಂದ ಮರುಬೆಳಗ್ಗೆ ಸರಿಯಾಗಿ ವರ್ಕೌಟ್ ಕೂಡಾ ಮಾಡಲಾರಿರಿ. ಹಾಗಾಗಿ ವರ್ಕೌಟ್ ಮಾಡುವಾಗ ಚೆನ್ನಾಗಿ ನಿದ್ರಿಸುವುದು ಅಗತ್ಯ.

#ಬೆವರಿದ ಬಟ್ಟೆ ಬದಲಿಸದಿರುವುದು: ನೀವು ಧರಿಸಿದ ವರ್ಕೌಟ್ ಬಟ್ಟೆ ಯಾವುದೇ ಬ್ರ್ಯಾಂಡ್ದಾಗಿರಬಹುದು, ಎಷ್ಟೇ ಕ್ಯೂಟ್ ಆಗಿರಬಹುದು. ಆದರೆ, ವರ್ಕೌಟ್ ಮುಗಿಯುತ್ತಿದ್ದಂತೆಯೇ ಅದನ್ನು ಬದಲಿಸಬೇಕು. ಇದರಿಂದ ಇನ್ಫೆಕ್ಷನ್ ಹಾಗೂ ದುರ್ನಾತ ಬರುವುದನ್ನು ತಡೆಯಬಹುದು.

#ಫ್ರೈಡ್ ಮೊಟ್ಟೆ: ಮೊಟ್ಟೆ ದೇಹಕ್ಕೆ ಉತ್ತಮ ಆಹಾರಗಳಲ್ಲಿ ಒಂದು. ಆದ್ರೆ ವರ್ಕೌಟ್ ಬಳಿಕ ಫ್ರೈಡ್ ಮೊಟ್ಟೆಯನ್ನು ಸೇವಿಸಬಾರದು. ಒಂದು ವೇಳೆ ಮೊಟ್ಟೆ ಸೇವಿಸಿದ್ರೆ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆಗಳಿರುತ್ತೇವೆ. ಆದ್ದರಿಂದ ಫ್ರೈಡ್ ಮಾಡಿರುವಂತಹ ಮೊಟ್ಟೆಯನ್ನು ಸೇವಿಸದೇ ಇರುವುದು ಉತ್ತಮ.

#ಸ್ಮೋಕ್ ಬ್ರೇಕ್ ತೆಗೆದುಕೊಳ್ಳುವುದು : ಸ್ಮೋಕಿಂಗ್ ಹಾಗೂ ವರ್ಕೌಟ್ ಒಂದಕ್ಕೊಂದು ಪೂರಾ ದುಶ್ಮನಿಗಳು. ಸಿಗರೇಟ್ನಲ್ಲಿರುವ ನಿಕೋಟಿನ್ ಹಾಗೂ ಕಾರ್ಬನ್ ಮೋನಾಕ್ಸೈಡ್ ಹೃದಯದ ಕವಾಟುಗಳನ್ನು ಕಿರಿದುಗೊಳಿಸುತ್ತವೆ. ಇದರಿಂದ ದೇಹದ ಎಲ್ಲ ಅಂಗಾಗಳಿಗೆ ರಕ್ತ ಪಂಪ್ ಮಾಡಲು ಹೃದಯ ಹೆಚ್ಚು ಒದ್ದಾಡಬೇಕು. ವರ್ಕೌಟ್ನಿಂದ ಮಸಲ್ಸ್ ಬೆಳೆಸಬೇಕೆಂದಿದ್ದರೆ ಅವುಗಳಿಗೆ ಆಕ್ಸಿಜನ್ ಪೂರೈಕೆ ಅಗತ್ಯವಿದೆ. ಆದರೆ, ಸಿಗರೇಟ್ ಈ ಆಮ್ಲಜನಕ ಪೂರೈಕೆಗೆ ತಡೆ ತರುತ್ತದೆ. ಹೀಗಾಗಿ, ವರ್ಕೌಟ್ ಬಳಿಕವಷ್ಟೇ ಅಲ್ಲ, ಶಾಶ್ವತವಾಗಿ ಸಿಗರೇಟ್ ಚಟಕ್ಕೆ ಬೈಬೈ ಹೇಳುವುದು ಉತ್ತಮ.

#ಮದ್ಯ ಸೇವನೆ : ವರ್ಕೌಟ್ನಿಂದ ದೇಹ ಅದಾಗಲೇ ಡಿಹೈಡ್ರೇಟ್ ಆಗಿರುತ್ತದೆ. ಹೀಗಾಗಿ, ನಂತರದಲ್ಲಿ ಆಲ್ಕೋಹಾಲ್ ಸೇವನೆ ಅಭ್ಯಾಸ ಮಾಡಿಕೊಂಡರೆ ಅದು ನಿಮ್ಮನ್ನು ಬಲು ಬೇಗ ಕುಡಿತದ ಚಟಕ್ಕೆ ಎಳೆದುಕೊಳ್ಳುತ್ತದೆ. ಅಲ್ಲದೆ, ಪ್ರತಿದಿನ ವರ್ಕೌಟ್ ಬಳಿಕ ಮದ್ಯ ಸೇವಿಸಿದರೆ ಕಾಲಾಂತರದಲ್ಲಿ ನಿಮ್ಮ ನರಮಂಡಲಕ್ಕೂ ದೇಹಕ್ಕೂ ಕನೆಕ್ಷನ್ ಮಿಸ್ ಹೊಡೆಯಲಾರಂಭಿಸುತ್ತದೆ. ಮೆದುಳು ಹೇಳಿದ್ದನ್ನು ದೇಹ ಕೇಳದೇ ಹೋಗಬಹುದು.

 

 

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ