ಭಾರತದ ಬೆಳವಣಿಗೆ ಶೇ.6ಕ್ಕೆ ಕುಸಿಯಲಿದೆ : ವಿಶ್ವ ಬ್ಯಾಂಕ್ ಮುನ್ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.13-ಪ್ರಸಕ್ತ ವಿತ್ತೀಯ ವರ್ಷದ ಆರಂಭಿಕ ತ್ರೈಮಾಸಿಕ ಅವಧಿಯ ವಿಶಾಲ ತಳಹದಿ ವಾಸ್ತವ ಸ್ಥಿತಿ ಘೋಷಣೆ ನಂತರ, ಭಾರತದ ಬೆಳವಣಿಗೆ ಶೇ. 6ಕ್ಕೆ ಕುಸಿಯಲಿದೆ ಎಂದು ವಿಶ್ವ ಬ್ಯಾಂಕ್ ಮುನ್ಸೂಚನೆ ನೀಡಿದೆ.  ಕಳೆದ ಹಣಕಾಸು ವರ್ಷದಲ್ಲಿ(2018-19) ಇದೇ ಅವಧಿಯಲ್ಲಿ ಭಾರತದ ಬೆಳವಣಿಗೆ ದರ ಶೇ.6.9ರಷ್ಟಿತ್ತು.

ವಾಷಿಂಗ್ಟನ್‍ನಲ್ಲಿ ಬಿಡುಗಡೆ ಮಾಡಲಾದ ವಿಶ್ವ ಬ್ಯಾಂಕ್‍ನ ದಕ್ಷಿಣ ಏಷ್ಯಾದ ಆರ್ಥಿಕ ಮುನ್ನೋಟ ಇತ್ತೀಚಿನ ಆವೃತಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡ 6ಕ್ಕೆ ಕುಸಿಯಲಿದೆ. ಆದಾಗ್ಯೂ ಬೆಳವಣಿಗೆ ಪ್ರಮಾಣ ನಿಧಾನವಾಗಿ ಚೇತರಿಸಿಕೊಳ್ಳಲಿದೆ. ಇದು 2021ರ ವೇಳೆಗೆ ಶೇ.6.9ರಷ್ಟು ಮತ್ತು 2022ರ ಅವಧಿಯಲ್ಲಿ ಶೇ.7.2ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಇಂಟರ್‍ನ್ಯಾಷನಲ್ ಮಾನಿಟರಿ ಫಂಡ್-ಐಎಂಎಫ್) ಜೊತೆ ವಿಶ್ವ ಬ್ಯಾಂಕ್‍ನ ವಾರ್ಷಿಕ ಸಭೆಗೆ ಮುನ್ನವೇ ಈ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆ ಸತತ ಎರಡನೇ ವರ್ಷ ಕುಂಠಿತವಾಗಿ ಸಾಗುತ್ತಿರುವುದನ್ನು ಉಲ್ಲೇಖಿಸಲಾಗಿದೆ.

Facebook Comments