ಬಿಎಸ್‍ಎಫ್‍ಗೆ ಆಧುನಿಕ ತಂತ್ರಜ್ಞಾನ ಪೂರೈಸಲು ಸರ್ಕಾರ ಬದ್ದ : ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಜೈಸಲ್ಮೇರ್,ಡಿ.5- ರಕ್ಷಣಾ ಕ್ಷೇತ್ರದಲ್ಲಿ ಮೊದಲ ಸಾಲಿನಲ್ಲಿ ನಿಂತಿರುವ ಗಡಿ ಭದ್ರತಾ ಪಡೆಗೆ ವಿಶ್ವ ದರ್ಜೆಯ ತಾಂತ್ರಿಕತೆಯನ್ನು ಪೂರೈಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿದ್ದಾರೆ.

ರಾಜಸ್ಥಾನದ ಜೈಸಲ್ಮೇರ್‍ನಲ್ಲಿ ನಡೆದ ಬಿಎಸ್‍ಎಫ್‍ನ 57ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಗಡಿಭದ್ರತಾ ಪಡೆ(ಬಿಎಸ್‍ಎಫ್)ಯ ಯೋಧರಿಗೆ ಉತ್ತಮ ತಂತ್ರಜ್ಞಾನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದೇಶದ ರಕ್ಷಣೆ ಎಂದರೆ ಅದು ಗಡಿಯ ರಕ್ಷಣೆ ಎಂದು ಅಭಿಪ್ರಾಯಪಟ್ಟರು.

ಎರಡು ದಿನಗಳ ರಾಜಸ್ಥಾನ ಭೇಟಿಗೆ ಆಗಮಿಸಿರುವ ಅವರು, ಪಾಕಿಸ್ಥಾನ-ಭಾರತ ಅಂತಾರಾಷ್ಟ್ರೀಯ ರೋಹಿತ್ ಷಾ ಭಾಗದಲ್ಲಿ ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡಿ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಿದರು.

ಉತ್ತಮ ಕಾರ್ಯ ನಿರ್ವಹಣೆಗಾಗಿ ಯೋಧರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ದೇಶಾದ್ಯಂತ 35 ಸಾವಿರ ಬಿಎಸ್‍ಎಫ್, ಪಿಆರ್‍ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿಗಳು ತಮ್ಮ ಬಲಿದಾನ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ಅಮಿತ್ ಷಾ ಹೇಳಿದರು.  2014ರ ಬಳಿಕ ಗಡಿಭದ್ರತೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Facebook Comments