ಅಂಡರ್-19 ವಿಶ್ವಕಪ್‍ಗೆ ಭಾರತ ತಂಡ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.2- ಹಾಲಿ ವಿಶ್ವಚಾಂಪಿಯನ್ಸ್ ಆಗಿರುವ ಭಾರತ ತಂಡವು ಹರಿಣಗಳ ನಾಡಿನಲ್ಲಿ ಜನವರಿ 17 ರಿಂದ ಫೆಬ್ರುವರಿ 9 ರವರೆಗೆ ನಡೆಯಲಿರುವ ಅಂಡರ್- 19 ವಿಶ್ವಕಪ್ ಗೆದ್ದು ವಿಶ್ವಕಪ್ ಮುಕುಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಭರವಸೆ ಮೂಡಿಸಿದೆ. ರಾಹುಲ್ ದ್ರಾವಿಡ್ ಗರಡಿಯಲ್ಲಿ ತರಬೇತಿ ಪಡೆದಿರುವ ಅಂಡರ್ 19 ತಂಡವನ್ನು ಉತ್ತರ ಪ್ರದೇಶದ ಪ್ರಿಯಮ್ ಗ್ರಗ್ ಅವರು ಮುನ್ನಡೆಸಿದರೆ, ಧ್ರುವ ಚಂದ್ ಜುರೆಲ್ ಉಪನಾಯಕ ಹಾಗೂ ವಿಕೆಟ್‍ಕೀಪರ್ ಜವಾಬ್ದಾರಿಯನ್ನು ಹೊತ್ತಿದ್ದರೆ, ಕುಮಲ್ ಕುಶಾಗರಾ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ 154 ಎಸೆತಗಳಲ್ಲೇ 203 ರನ್ ಗಳಿಸುವ ಮೂಲಕ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಯಶಸ್ವಿ ಜೈಸ್ವಾಲ್‍ಗೂ ತಂಡದಲ್ಲಿ ಸ್ಥಾನ ಕಲ್ಪಿಸಿದ್ದರೆ, ದಿವೇಶ್ ಸೆಕ್ಸೇನಾ, ಉತ್ತರಖಂಡಾದ ಶಶ್ವಾಂತ್ ರವಾತ್, ಹೈದರಾಬಾದ್‍ನ ತಿಲಕ್ ವರ್ಮ ರಂತಹ ಸ್ಫೋಟಕ ಬ್ಯಾಟ್ಸ್‍ಮನ್‍ಗಳು ಅವಕಾಶ ಪಡೆದಿದ್ದಾರೆ.

ಭಾರತಕ್ಕೆ ಎದುರಾಳಿಗಳು: ಅಂಡರ್-19 ವಿಶ್ವಕಪ್‍ನಲ್ಲಿ 16 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ 4 ಗುಂಪುಗಳಾಗಿ ವಿಂಗಡಿಸಲಾಗಿದೆ, ಭಾರತ ತಂಡವು ಎ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, ಗುಂಪಿನ ಹಂತದಲ್ಲಿ ಜಪಾನ್, ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ.

ತಂಡದ ವಿವರ: ಪ್ರಯಾಮ್ ಗ್ರಗ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ದಿವೈಶ್ ಸೆಕ್ಸೇನಾ, ಧ್ರುವ ಚಂದ್ ಜುರೆಲ್(ಉಪನಾಯಕ, ವಿಕೆಟ್‍ಕೀಪರ್), ಶಶ್ವಾಂತ್ ರವಾತ್, ದಿವೈಶ್ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಶೋನೈ, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅತವಾರ ಅನ್ಕೊಲೆಕರ್, ಕುಮಾರ್ ಕುಶಾಗರಾ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ, ವಿದ್ಯಾಧರ್‍ಪಾಟೀಲ್.

ಅಂಡರ್-19 ಮುಕುಟ ಗೆದ್ದ ಭಾರತ:
2000- ಮಹಮ್ಮದ್ ಕೈಫ್ (ನಾಯಕ)ಶ್ರೀಲಂಕಾ-178, ಭಾರತ-180/4 ಭಾರತಕ್ಕೆ 6 ವಿಕೆಟ್ ಜಯ,
2008- ವಿರಾಟ್ ಕೊಹ್ಲಿ (ನಾಯಕ) ಭಾರತ- 159, ದಕ್ಷಿಣ ಆಫ್ರಿಕಾ-103/8 ಭಾರತಕ್ಕೆ 12 ರನ್‍ಗಳ ದಿಗ್ವಿಜಯ (ಡೆಕ್‍ವರ್ತ್‍ಲೂಯಿಸ್ ನಿಯಮ)
2012- ಉನ್ಮುಕ್ತ್‍ಚಾಂದ್ (ನಾಯಕ) ಆಸ್ಟ್ರೇಲಿಯಾ- 225/8, 227/4 ಭಾರತಕ್ಕೆ 6 ವಿಕೆಟ್‍ಗಳ ಗೆಲುವು
2018- ಪೃಥ್ವಿಶಾ (ನಾಯಕ) ಆಸ್ಟ್ರೇಲಿಯಾ- 216, ಭಾರತ-220/2 ಭಾರತಕ್ಕೆ 8 ವಿಕೆಟ್‍ಗಳ ಜಯಭೇರಿ

ರಾಹುಲ್ ದ್ರಾವಿಡ್ ಸಂತಸ: ಕಳೆದ ಬಾರಿಯ ವಿಶ್ವಕಪ್‍ನಲ್ಲಿ ಹೆಚ್ಚಾಗಿ ಅಲ್‍ರೌಂಡರ್‍ಗಳಿಗೆ ಮಣೆ ಹಾಕಿದ್ದರಿಂದ ಪೃಥ್ವಿಶಾ ಸಾರಥ್ಯದ ತಂಡವು ಫೈನಲ್‍ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ವಿಶ್ವಚಾಂಪಿಯನ್ಸ್ ಆಗಿತ್ತು, ಈ ಬಾರಿಯು ಸಮತೋಲಿತ ತಂಡವನ್ನು ಆಯ್ಕೆ ಮಾಡಿರುವುದರಿಂದ ತಂಡವು ಚಾಂಪಿಯನ್ಸ್ ಆಗುವ ಭರವಸೆಯನ್ನು ಮೂಡಿಸಿದೆ ಎಂದು ಅಂಡರ್ 19 ತರಬೇತುದಾರ ರಾಹುಲ್ ದ್ರಾವಿಡ್ ಸಂತಸವನ್ನು ಹೊರಹಾಕಿದ್ದಾರೆ.

ದಕ್ಷಿಣ ಆಫ್ರಿಕಾವು ವೇಗದ ಬೌಲರ್‍ಗಳಿಗೆ ನೆರವು ಮೀಡುವುದರಿಂದ ಈ ಬಾರಿ ಆ ವಿಭಾಗದತ್ತಲೂ ಅತಿ ಹೆಚ್ಚು ಗಮನ ಹರಿಸಿದ್ದೇವೆ, ಸ್ಪಿನ್ನರ್ ವಿಭಾಗವು ಸದೃಢವಾಗಿದ್ದು, ಒಂಭತ್ತನೇ ಕ್ರಮಾಂಕದವರೆಗೂ ಉತ್ತಮ ಬ್ಯಾಟ್ಸ್‍ಮನ್‍ಗಳನ್ನೂ ತಂಡ ಹೊಂದಿದ್ದು ಉತ್ತಮ ಪ್ರದರ್ಶನ ಹೊರಹೊಮ್ಮುವ ವಿಶ್ವಾಸವಿದೆ ಎಂದು ಹೇಳಿದರು.

Facebook Comments