ವಿಶ್ವಕಪ್ ಸೆಮಿಫೈನಲ್ ಅರ್ಹತೆ ಯಾರಿಗುಂಟು, ಯಾರಿಗಿಲ್ಲ..?

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಜಸನ್ ಹೋಲ್ಡರ್ ಸಾರಥ್ಯದ ವೆಸ್ಟ್‍ಇಂಡೀಸ್ ವಿರುದ್ಧ ಸೆಣಸಲಿದೆ. ಪಂದ್ಯಾವಳಿಯಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡಿರುವ ವೆಸ್ಟ್‍ಇಂಡೀಸ್ ತಂಡವು ಭಾರತಕ್ಕೆ ಸುಲಭದ ತುತ್ತಾಗುತ್ತದೆ ಎಂಬ ಭಾವನೆ ಇದೆ.

ಆದರೆ ಅನಿರೀಕ್ಷಿತವಾಗಿ ಪುಟಿದೇಳುವ ಸಾಮಥ್ರ್ಯ ವೆಸ್ಟ್‍ಇಂಡೀಸ್ ತಂಡಕ್ಕಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮ ಎಂದು ಹೇಳಲಾಗುತ್ತಿದೆಯಾದರೂ, ಕೊನೇ ಘಳಿಗೆಯಲ್ಲಿ ಏನು ಬೇಕಾದರೂ ಆಗಬಹುದು.

ಪಂದ್ಯಾವಳಿಯಲ್ಲಿ ಭಾರತ ತಂಡ ಇದುವರೆಗೆ ಅಜೇಯರಾಗಿ ಉಳಿದಿದ್ದು ವೆಸ್ಟ್‍ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳ ವರುದ್ಧ ಆಡಬೇಕಾಗಿದೆ. ನಾಲ್ಕೂ ಪಂದ್ಯಗಳನ್ನು ಸೋತರೆ ಮಾತ್ರ ಭಾರತದ ಹಾದಿ ದುರ್ಗಮ. 7 ಪಂದ್ಯಗಳಿಂದ 8 ಅಂಕ ಗಳಿಸಿರುವ ಇಯಾನ್ ಮಾರ್ಗನ್ ಮುಂದಾಳತ್ವದ ಇಂಗ್ಲೆಂಡ್ ತಂಡವು ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕು. ಆಗ ಆ ತಂಡ ಸೆಮಿಫೈನಲ್‍ಗೆ ಬರಬಹುದು.

7 ಪಂದ್ಯಗಳಿಂದ 7 ಅಂಕ ಸಂಪಾದಿಸಿರುವ ಮುಶ್ರಫೆ ಮೊರ್ಟಾಜಾರ ನಾಯಕತ್ವದ ಬಾಂಗ್ಲಾದೇಶ ಕೂಡ ಉಳದ ಎರಡು ಪಂದ್ಯಗಳನ್ನು ಗೆಲ್ಲಬೇಕು. ಆಗ ಅದರ ಅಂಕ 11ಕ್ಕೆ ಏರುತ್ತದೆ. ಇಷ್ಟಾದರೆ ಸಾಲದು. ಇಂಗ್ಲೆಂಡ್, ಶ್ರೀಲಂಕಾ, ಪಾಕಿಸ್ತಾನ ತಂಡಗಳು ಎಲ್ಲ ಪಂದ್ಯಗಳನ್ನು ಸೋತಾಗ ಮಾತ್ರ ಬಾಂಗ್ಲಾದೇಶಕ್ಕೆ ಚಾನ್ಸ್.

6 ಪಂದ್ಯಗಳಿಂದ 6 ಅಂಕ ಪಡೆದಿರುವ ದಿಮ್ಮುತ ಕರುಣರತ್ನೆ ಸಾರಥ್ಯದ ಶ್ರೀಲಂಕಾ ತಂಡವು ಸೆಮಿಫೈನಲ್‍ಗೆ ಬರುವುದು ತುಂಬಾ ಕಠಿಣ. ಕೇವಲ 3 ಅಂಕ ಗಳಿಸಿರುವ ವೆಸ್ಟ್‍ಇಂಡೀಸ್ ತಂಡದ ಸ್ಥಿತಿ ನಿರಾಶಾದಾಯಕವಾಗಿದೆ.

ಕೇನ್ ವಿಲಿಯಮ್ಸ್ ಸಾರಥ್ಯದ ನ್ಯೂಜಿಲೆಂಡ್ ವಿರುದ್ಧದ ಕಳೆದ ರಾತ್ರಿ ಶರ್ಫಾರಾಜ್‍ಖಾನ್ ನೇತೃತ್ವದ ಪಾಕಿಸ್ತಾನ ಗೆಲುವು ಸಾಧಿಸುವ ಮೂಲಕ ವಿಂಡೀಸ್ ಹಾಗೂ ಲಂಕನ್ನರ ಸೆಮೀಸ್ ಕನಸನ್ನು ಭಗ್ನಗೊಳಿಸಿದೆ. ಪಾಕ್ ಆಡಿರುವ 7 ಪಂದ್ಯಗಳಿಂದ 7 ಅಂಕ ಪಡೆದಿದೆ.

ಅದು ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಬಹಳ ದೊಡ್ಡ ಅಂತರದಿಂದ ಗೆಲ್ಲಬೇಕು. ಆಗ ರನ್‍ರೇಟ್ ಆಧಾರದ ಮೇಲೆ ಅದರ ಭವಿಷ್ಯ ಅವಲಂಬಿಸುತ್ತದೆ. ಸೆಮಿಫೈನಲ್‍ಗೆ ಬರಲು ನ್ಯೂಜಿಲೆಂಡ್ ತಂಡಕ್ಕೆ ಒಂದು ಅಂಕ ಸಾಕು. 11 ಅಂಕ ಗಳಿಸಿರುವ ಆ ತಂಡವು ಅಂಕ ಪಟ್ಟಿಯ ಎರಡನೇ ಸ್ಥಾನದಲ್ಲಿದೆ.

ಡುಪ್ಲೆಸಿಸ್ ಸಾರಥ್ಯದ ದಕ್ಷಿಣ ಆಫ್ರಿಕಾ ಮತ್ತು ಗುಲ್‍ಬದೀನ್ ನಬಿ ಮುಂದಾಳತ್ವದ ಆಫ್ಘಾನಿಸ್ತಾನ ತಂಡಗಳು ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದ್ದು 7 ಪಂದ್ಯಗಳಿಂದ 6ರಲ್ಲಿ ಗೆಲುವು ಸಾಧಿಸುವ ಮೂಲಕ 12 ಅಂಕಗಳನ್ನು ಕಳೆ ಹಾಕಿರುವ ಆರೋನ್‍ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಇನ್ನುಳಿದ 3 ಸ್ಥಾನಕ್ಕಾಗಿ 6 ತಂಡಗಳ ನಡುವೆ ಬಗ್‍ಫೈಟ್ ಇದ್ದು ಯಾರಿಗೂ ಸೆಮಿಫೈನಲ್‍ಗೇರುವ ಅವಕಾಶ ಲಭಿಸುತ್ತದೆಯೋ ಕಾಲವೇ ನಿರ್ಧರಿಸಬೇಕು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin