ವಿಶ್ವಕಪ್ ಕ್ರಿಕೆಟ್ ಅವಕಾಶ ವಂಚಿತರಾದ ಸ್ಟಾರ್ ಆಟಗಾರರು..!

ಈ ಸುದ್ದಿಯನ್ನು ಶೇರ್ ಮಾಡಿ

ಅಂತರರಾಷ್ಟ್ರೀಯ ಕ್ರಿಕೆಟ್ ಪಟುಗಳಿಗೆ ವಿಶ್ವಕಪ್ ಕನಸಿದ್ದಂತೆ, ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ರಾಷ್ಟ್ರ ವನ್ನು ವಿಶ್ವ ಚಾಂಪಿಯನ್ನಾಗಿಸುವ ಹೆಬ್ಬಯಕೆ ಇದ್ದೇ ಇರುತ್ತದೆ.

ಇದು ಕೆಲವರಿಗೆ ಕೈಗೂಡಿದರೆ ಇನ್ನೂ ಕೆಲ ಆಟಗಾರರಿಗೆ ವಿಶ್ವಕಪ್ ಮರೀಚಿಕೆಯೇ ಸರಿ. ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಕೂಡ ವಿಶ್ವ ಕಪ್ ಗೆಲ್ಲಲು ಕಾಲು ಶತಮಾನ ಕಾಯಬೇಕಾಯಿತು.

ವಿಶ್ವಕಪ್ ಜಾತ್ರೆ ಆರಂಭಗೊಂಡಾಗಿ ನಿಂದಲೂ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಒಮ್ಮೆಯೂ ವಿಶ್ವ ಚಾಂಪಿಯನ್ಸ್ ಆಗದಿರುವುದು ವಿಪರ್ಯಾಸ. ಆದರೆ ಅವರ ಎದುರಾಳಿ ತಂಡವೆಂದೇ ಬಿಂಬಿಸಲ್ಪಟ್ಟಿರುವ ಆಸ್ಟ್ರೇಲಿಯಾ ಐದು ಬಾರಿ ವಿಶ್ವ ಕಿರೀಟ ತೊಡುವ ಮೂಲಕ ದಾಖಲೆ ನಿರ್ಮಿಸಿದೆ.

ಕ್ರಿಕೆಟ್ ಜಗತ್ತಿನ ದೈತ್ಯ ಆಟಗಾರರೆಂದು ಗುರುತಿಸಿಕೊಂಡಿರುವ ಕೆರಿಬಿಯನ್ ನಾಡಿನ ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್, ಕ್ರಿಸ್‍ಗೇಲ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ನ್ಯೂಜಿಲೆಂಡ್‍ನ ಡೆನಿಯಲ್ ವಿಟ್ಟೋರಿ , ಪಾಕಿಸ್ತಾನದ ಸಯೀದ್ ಆಫ್ರಿದಿ, ಶ್ರೀಲಂಕಾದ ಮಹೇಲ ಜಯವ ರ್ಧನೆ ತಮ್ಮ ವೃತ್ತಿ ಜೀವನದಲ್ಲಿ 5 ಬಾರಿ ವಿಶ್ವಕಪ್‍ನಲ್ಲಿ ಪಾಲ್ಗೊಂಡರೂ ಕಪ್ ಗೆಲ್ಲಲು ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ.

ವಿಶ್ವಕಪ್‍ನ ಮೊದಲ ಎರಡು ಆವೃತ್ತಿ ಗಳಲ್ಲಿ (1975, 79)ರ ವಿಶ್ವಚಾಂಪಿಯನ್ಸ್ ವೆಸ್ಟ್‍ಇಂಡೀಸ್ ತಂಡದ ಆಕ್ರಮಣಕಾರಿ ಆಟಗಾರ 2007ರಲ್ಲಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿ 2010ರಲ್ಲಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಬಂದ ಲಾರಾ 2011ರ ವಿಶ್ವಕಪ್‍ನಲ್ಲಿ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. ಆ ತಂಡದ ಪರ ಆಡಿದ್ದ ಶಿವನಾರಾಯಣ್ ಚಂದ್ರಪಾಲ್ ಹಾಗೂ ಕ್ರಿಸ್‍ಗೇಲ್‍ಗೂ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶ ದೊರೆಯಲಿಲ್ಲ.

1996ರಲ್ಲಿ ವಿಶ್ವಚಾಂಪಿಯನ್ಸ್ ಆಗಿದ್ದ ಶ್ರೀಲಂಕಾದ ಪರ 5 ವಿಶ್ವಕಪ್ ಆಡಿದ ಮಹೇಲ ಜಯವರ್ಧನೆ 2011ರಲ್ಲಿ ತಂಡದ ಸಾರಥ್ಯವನ್ನು ವಹಿಸಿದ್ದರು ಕೂಡ ವಿಶ್ವಕಪ್ ಮುಕುಟಕ್ಕೆ ಮುತ್ತಿಕ್ಕುವ ಅವಕಾಶ ದೊರೆಯಲಿಲ್ಲ 2007ರಲ್ಲೂ ಶ್ರೀಲಂಕಾ ಫೈನಲ್‍ಗೇರಿತ್ತು.

1992ರ ವಿಶ್ವಕಪ್ ಜಾತ್ರೆಯಲ್ಲಿ ಚಾಂಪಿಯನ್ಸ್ ಆಗಿದ್ದ ಪಾಕಿಸ್ತಾನದ ಪರ ಆಡಿದ ಸಯೀದ್ ಆಫ್ರಿದಿ ಕೂಡ ವಿಶ್ವಕಪ್‍ನ 5 ಮಹಾಜಾತ್ರೆಯಲ್ಲಿ ಪಾಲ್ಗೊಂಡಿದ್ದರೂ ಪಾಕ್ 1999ರಲ್ಲಿ ಫೈನಲ್‍ಗೇರಿತ್ತಾದರೂ ಆಸ್ಟ್ರೇಲಿಯಾದಿಂದ ಮುಖಭಂಗ ಅನುಭವಿಸಿದ್ದಲ್ಲದೆ ಆಫ್ರಿದಿ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶದಿಂದ ವಂಚಿತರಾದರು.

ವಿಶ್ವಕಪ್‍ನಲ್ಲಿ ಚೋಕರ್ಸ್ ಎಂದೇ ಗುರುತಿಸಿ ಕೊಂಡಿರುವ ದಕ್ಷಿಣ ಆಫ್ರಿಕಾದ ಅಲೌಂಡರ್ ಜಾಕ್ ಕ್ಯಾಲಿಸ್ ತಂಡದ ಗೆಲುವಿನಲ್ಲಿ ಮಹತ್ತರ ವಹಿಸುತ್ತಿದ್ದರಾದರೂ ಆ ತಂಡದ ಸಾಧನೆ ಸೆಮಿಫೈನಲ್‍ಗೇ ಮುಕ್ತಾಯಗೊಂಡರೆ, ಕಳೆದ ಬಾರಿ ವಿಶ್ವಕಪ್‍ನ ರನ್ ಆಪ್ ನ್ಯೂಜಿಲೆಂಡ್  ತಂಡದ ಅಲ್‍ರೌಂಡರ್ ಡೇನಿಯಲ್ ವಿಟ್ಟೋರಿಗೂ ವಿಶ್ವಕಪ್ ಗೆಲ್ಲುವ ಭಾಗ್ಯ ಸಿಗಲಿಲ್ಲ.

ವಿಶ್ವಕಪ್‍ನಲ್ಲಿ ದ್ವಿಶತಕ (215 ರನ್) ಗಳಿಸಿರುವ ರನ್ ಮೆಷಿನ್ ಗೇಲ್ 26 ಪಂದ್ಯಗಳಿಂದ 2 ಶತಕ, 5 ಅರ್ಧಶತಕಗಳ ನೆರವಿನಿಂದ 944 ರನ್‍ಗಳನ್ನು ಗಳಿಸಿದ್ದು ಸಹಸ್ರಾರ ರನ್ ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ. ಬೌಲಿಂಗ್‍ನಲ್ಲೂ ತಮ್ಮ ಚಮತ್ಕಾರ ತೋರಿಸಿರುವ ಗೇಲ್ ಇದುವರೆಗೂ 14 ವಿಕೆಟ್‍ಗಳನ್ನು ಕೆಡವಿದ್ದಾರೆ.

ಈಗ ತಮ್ಮ 6ನೇ ವಿಶ್ವಕಪ್‍ನ ಋತುವಿನಲ್ಲಿ ಪಾಲ್ಗೊಳ್ಳುತ್ತಿರುವ ಕ್ರಿಸ್ ಗೇಲ್ ತಮ್ಮ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳುವ ಅಂಚಿನಲ್ಲಿ ವೆಸ್ಟ್‍ಇಂಡೀಸ್ ಅನ್ನು ಚಾಂಪಿಯನ್ಸ್ ಮಾಡಬೇಕೆಂಬ ಕಾತರದಿಂದಿದ್ದಾರೆ. ವಿಶ್ವಕಪ್ ಮುಕುಟ ಕೆಲ ಆಟಗಾರರಿಗೆ ಮರೀಚಿಕೆಯೇ ಸರಿ.

-ಜಯಪ್ರಕಾಶ್

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ