ಜಲದೊಳು ಚದುರಂಗ ಚತುರರ ಚಮತ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಚೆಸ್ ಅಥವಾ ಚದುರಂಗ ಪ್ರಾಚೀನ ಒಳಾಂಗಣ ಕ್ರೀಡೆ. ಈ ಆಟಕ್ಕೆ ಬುದ್ದಿವಂತಿಕೆ ಮತ್ತು ಜಾಣ್ಮೆ ಅಗತ್ಯ. ಇಂಥ ಚದುರಂಗದಾಟವನ್ನು ನೀರಿನೊಳಗೆ ಆಡುವ ಪರಿಕಲ್ಪನೆಯ ಸ್ಪರ್ಧೆಯೊಂದು ಲಂಡನ್‍ನಲ್ಲಿ ನಡೆಯಿತು. ಈ ಕುರಿತು ಇಲ್ಲೊಂದು ವರದಿ.  ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ನಡೆದ ವಿಶ್ವ ಡೈವ್ ಚೆಸ್ ಚಾಂಪಿಯನ್‍ಶಿಪ್ ಸ್ಪರ್ಧೆ ತುಂಬಾ ವಿಭಿನ್ನವಾಗಿತ್ತು. ಇದು ನೀರಿನಲ್ಲಿ ಆಡುವ ಚದುರಂಗದಾಟ. ಖ್ಯಾತ ಈಜುಪಟುಗಳು ಮತ್ತು ಚದುರಂಗ ಚತುರರು ಈ ವಿಶ್ವಸ್ಪರ್ಧೆಯಲ್ಲಿ ಪಾಲ್ಗೊಂಡರು.

ಇದು ಚೆಸ್‍ನ ನಿಯಮಗಳನ್ನು ಹೊಂದಿದ್ದರೂ, ಸ್ಪರ್ಧಿಗಳು ನೀರಿನ ಒಳಗೆ ಮುಳುಗಿ ಅಲ್ಲಿರುವ ಇರುವ ಆಯಸ್ಕಾಂತ ಚದುರಂಗದ ಹಲಗೆ ಮತ್ತು ಕಾಯಿಗಳೊಂದಿಗೆ ಆಟವಾಟಬೇಕಿತ್ತು.  ವಿಶೇಷ ಈಜುಕೊಳದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಚದುರಂಗ ಚತುರರು ಪ್ರತಿಬಾರಿ ಕಾಯಿಯನ್ನು ನಡೆಸಲು ಉಸಿರು ಬಿಗಿಹಿಡಿದು ನೀರಿನಲ್ಲಿ ಮುಳಗಿ ಮೂವ್ ಮಾಡಿ ನಂತರ ಮೇಲೇಳಬೇಕು. ನೀರಿನಲ್ಲಿ ಮುಳುಗಿ ಕಾಯಿಯನ್ನು ಮುನ್ನಡೆಸದ ಹೊರತು ಅವರು ಈಜುಕೊಳದ ಒಳಗಿನಿಂದ ಮೇಲೇಳುವಂತಿಲ್ಲ ಎಂಬ ನಿಯಮವನ್ನು ಸೇರಿಸಲಾಗಿತ್ತು.  ಈ ಅಸಾಮಾನ್ಯ ಹೈಬ್ರಿಡ್ ಚೆಸ್ ಮತ್ತು ಜಲಕ್ರೀಡೆ ಅಮೆರಿಕದ ಎಟಾನ್ ಲೈಫೆಲ್ಡ್ ಅವರ ಕನಸಿನ ಕೂಸು. ಬುದ್ಧಿವಂತಿಕೆ, ಚದುರಂಗ ಚತುರತೆ ಹಾಗು ಕ್ಷಿಪ್ರವಾಗಿ ಕಾಯಿಗಳನ್ನು ನಡೆಸುವ ಸಾಮಥ್ರ್ಯದ ಸಂಯೋಜನೆಯನ್ನು
ಡೈವ್ ಚೆಸ್ ಆಟ ಒಳಗೊಂಡಿರುತ್ತದೆ.  ಪ್ರತಿ ಪಂದ್ಯವು ನಾಲ್ಕು ಸುತ್ತುಗಳಲ್ಲಿ ನಡೆಯುತ್ತವೆ. ಜಲ ಚದುರಂಗದಾಟಕ್ಕಾಗಿ ಗರಿಷ್ಠ 40 ನಿಮಿಷಗಳ ಸಮಯ ನಿಗದಿಗೊಳಿಸಲಾಗುತ್ತದೆ.

ds

Facebook Comments

Sri Raghav

Admin