‘ಧಮ್’ ಇದ್ರೆ ಧಮ್ ಬಿಡಿ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31- ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಜೀ ಕನ್ನಡ ವಾಹಿನಿಯ ಕನ್ನಡದ ಕಣ್ಮಣಿ ಪುಟಾಣಿ ಕಲಾವಿದರ ತಂಡ ಪ್ರೆಸ್ ಕ್ಲಬ್‍ನಲ್ಲಿ ಬೀದಿನಾಟಕ ಮೂಲಕ ಜಾಗೃತಿ ಮೂಡಿಸಿದರು.

ಬೀದಿನಾಟಕಕ್ಕೆ ಸ್ವಾಮಿ ಎಂಬುವರು ನಿರ್ದೇಶನ ಮಾಡಿದ್ದರು. ಒಟ್ಟು ಹತ್ತು ಪುಟಾಣಿ ಕಲಾವಿದರ ತಂಡ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾಟಕ ಪ್ರದರ್ಶಿಸಿ ಅರಿವು ಮೂಡಿಸಿದರು.

ಯಮರಾಜ ಪಾತ್ರದಾರಿಯಾಗಿ ಸಂಹಿತಾ (ಉಡುಪಿ), ಚಿತ್ರಗುಪ್ತನ ಪಾತ್ರದಾರಿಯಾಗಿ ಸಮೃದ್ಧಿ (ಕುಂದಾಪುರ) ಅದ್ಬುತವಾಗಿ ನಟಿಸಿ ಎಲ್ಲರ ಮನಸೂರೆಗೊಂಡರು. ನಾಟಕ ಬಳಿಕ ಮಾತನಾಡಿದ ಯಮರಾಜ ವೇಷಧಾರಿ ಪುಟಾಣಿ ಕಲಾವಿದೆ ಸಂಹಿತಾ, ವಿಶ್ವದಲ್ಲಿ ತಂಬಾಕು ಬಳಕೆ ಜಾಸ್ತಿಯಾಗುತ್ತಿದೆ.

ಇದರಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಜನರು ಎಚ್ಚರದಿಂದಿರಬೇಕು. ಈ ಉತ್ಪನ್ನಗಳನ್ನು ಸೇವಿಸಬಾರದು ಎಂದು ಮನವಿ ಮಾಡಿದರು.

ಕದ್ದು ಮುಚ್ಚಿ ತಂಬಾಕು ಬೆಳೆಯುವವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ತಂಬಾಕನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಧಮ್ ಇದ್ರೆ ಧಮ್ ಬಿಡಿ ಎಂದು ಜನರಿಗೆ ಸವಾಲ್ ಹಾಕಿದರು.

ಚಿತ್ರಗುಪ್ತ ಪಾತ್ರಧಾರಿ ಸಮೃದ್ಧಿ ಮಾತನಾಡಿ, ತಂಬಾಕು ಕೇವಲ ಜೇಬನ್ನು ಖಾಲಿ ಮಾಡದೆ ಆರೋಗ್ಯವನ್ನು ಖಾಲಿ ಮಾಡುತ್ತದೆ. ಯುವಕರು, ಹಿರಿಯರು ತಂಬಾಕು ದುಶ್ಚಟಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.

Facebook Comments

Sri Raghav

Admin