ಇಂದು ‘ವಿಶ್ವ ತೊನ್ನು ನಿರ್ಮೂಲನೆ ದಿನ’ : ತೊನ್ನು ನಿವಾರಣೆಗೆ ಇಲ್ಲಿದೆ ಕೇಲವು ಸಲಹೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬಿಳಿ ಮಚ್ಚೆ ಅಥವಾ ತೊನ್ನು ಇರುವ ವರನ್ನು ಕಂಡರೆ ಇಂತಹ ಆಧುನಿಕ ಯುಗದಲ್ಲಿ ವಿಚಿತ್ರ ರೀತಿಯಲ್ಲಿ ನೋಡುವವರಿದ್ದಾರೆ. ಅವರೊಂದಿಗೆ ಬೆರೆಯಲು ಹಿಂದೇಟು ಹಾಕುತ್ತಾರೆ. ಆದರೆ ಇದು ಖಂಡಿತಾ ಸರಿಯಲ್ಲ. ಇದು ಅಂಟುರೋಗವೂ ಅಲ್ಲ.

ವಿಟಿಲ್‍ಗೋ-ತೊನ್ನು, ಹಾಲ್ಚರ್ಮ, ಬಿಳಿಮಚ್ಚೆ ಎಂದು ಕರೆಯುತ್ತಾರೆ. ಈ ಹಿಂದೆ ಇದನ್ನು ಶ್ವೇತ ಕುಷ್ಠ ಎಂದು ಬಣ್ಣಿಸಲಾಗಿದೆ. ಚರ್ಮ ಅಥವಾ ಕೂದಲಿನ ಯಾವುದೇ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಶದ ಕೊರತೆಯಿಂದಾಗಿ ಬಿಳಿಯಾಗಿರುವ ಇಲ್ಲವೇ ಬಿಳಿ ಕಲೆಗಳಾಗುವುದನ್ನು ತೊನ್ನು ಎಂದೂ ಕರೆಯಲಾಗುತ್ತದೆ.
ತೊನ್ನು ಪ್ರಾಚೀನ ಕಾಲದಲ್ಲೇ ಕಂಡು ಬಂದಿತಂತೆ.

ಬಹು ಪುರಾತನ ನಾಗರಿಕತೆ ಮತ್ತು ಧರ್ಮಗಳಲ್ಲೂ ಬಿಳಿ ಮಚ್ಚೆ ಬಗ್ಗೆ ಉಲ್ಲೇಖವಿದೆ. ಕ್ರಿಸ್ತಪೂರ್ವ 1400ರಲ್ಲಿ ಬರೆಯಲಾದ ಅಥರ್ವಣವೇದದಲ್ಲೂ ತೊನ್ನು ರೋಗವನ್ನು ಬಣ್ಣಿಸಲಾಗಿದೆ. ಮೊದಲ ಶತಮಾನದಲ್ಲಿ ರೋಮನ್ ವೈದ್ಯ ಅಲುಸ್ ಕಾರ್ನೆಲಿಯಸ್ ಸೆಲ್‍ಸುಸ್ ತನ್ನ ಪ್ರಾಚೀನ ವೈದ್ಯಕೀಯ ಪಠ್ಯ ಡಿ ಮೆಡಿಸಿನಾದಲ್ಲಿ ಇದಕ್ಕೆ ವಿಟಿಲ್‍ಗೋ ಎಂದು ಕರೆದಿದ್ದಾರೆ.

ಕ್ರಿಸ್ತಪೂರ್ವ 200ರಲ್ಲಿ ಮನುಸ್ಮತಿಯಲ್ಲಿ ತೊನ್ನು ರೋಗವನ್ನು ಶ್ವೇತ ಕುಷ್ಠ ಎಂದು ಬಣ್ಣಿಸಲಾಗಿದೆ. ಇದನ್ನು ಪೀಬಾಲ್ಡ್ ಸ್ಕಿನ್ ಹಾಗೂ ಅರ್ಜಿತ ಬಿಳಿಚರ್ಮ ಎಂದು ಕರೆಯಲಾಗುತ್ತದೆ.

ಮೆಲನೋಸೈಟೆ: ವಿಟಿಲ್‍ಗೋ, ಹಾಲ್ಚರ್ಮ, ಬಿಳಿಮಚ್ಚೆ ಎಂದು ಕರೆಯಲ್ಪಡುವ ತೊನ್ನಿಗೆ ಮೂಲ ಕಾರಣವೆಂದರೆ ಮೆಲನೊಸೈಟೆ ಎಂಬ ವರ್ಣದ್ರವ್ಯ. ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸುವ ಮೆಲನೊಸೈಟೆ ಕೋಶಗಳ ನಷ್ಟದಿಂದಾಗಿ ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಮೆಲನೊಸೈಟ್ ಕೋಶಗಳು ನಾಶವಾಗಿ ಚರ್ಮದ ಮೇಲೆ ಬಿಳಿ ಕಲೆಗಳನ್ನು ಉಳಿಸುತ್ತದೆ. ಈ ಸ್ಥಳದಲ್ಲಿ ಬೆಳೆಯುವ ಕೂದಲು ಕೂಡ ಇದರ ಪರಿಣಾಮಕ್ಕೆ ಒಳಗಾಗಿ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಚರ್ಮವು ಹಾನಿಗೀಡಾಗುತ್ತದೆ. ತೊನ್ನು ರೋಗದಿಂದ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ.

ಮೆಲನೊಸೈಟೆ ಬಣ್ಣ ನೀಡುವ ಕೋಶವಾಗಿದ್ದು, ಚರ್ಮ, ಕೂದಲುಗಳು, ಶ್ಲೇಷ್ಮ ಪೆÇರೆ, ಕಣ್ಣುಗಳು, ಕಿವಿಗಳು ಮತ್ತು ಮೆದುಳಿನಲ್ಲಿ ಇರುತ್ತದೆ. ಮೆಲನೊಸೈಟೆಯು ಟೈರೋಸಿನ್ ಎಂಬ ಕೋಶವನ್ನು ಹಿಡಿದು ಮೆಲನಿನ್ ವರ್ಣ ದ್ರವ್ಯವಾಗಿ ಪರಿವರ್ತಿ ಸುತ್ತದೆ. ಒಂದು ಮೆಲನೊಸೈಟ್ ಮೆಲನಿನ್‍ನನು 36 ಕೆರಾಟಿನೊಸೈಟ್ ಆಗಿ ವಿತರಿಸುತ್ತದೆ. ಯೂಮೆಲನಿನ್ ಕಡು ಕಂದು ಬಣ್ಣವನ್ನು ಮತ್ತು ಫಿಯೋಮೆಲನಿನ್ ಕೆಂಪು ಮಿಶ್ರಿತ ಕಂದು ಅಥವಾ ಹಳದಿ ಬಣ್ಣವನ್ನು ಹೊಂದಿರುತ್ತದೆ.

ಯೂಮೆಲನಿನ್ ಮತ್ತು ಫಿಯೋಮೆಲನಿನ್‍ನ ವಿಭಿನ್ನ ಸಾಂದ್ರತೆಗಳು ಚರ್ಮಕ್ಕೆ ವಿಭಿನ್ನ ಬಣ್ಣವನ್ನು ನೀಡುತ್ತದೆ. ನಿಗ್ರೋಗಳು ಹೆಚ್ಚು ಯೂಮೆಲನಿನ್ ಬಣ್ಣ ಹೊಂದಿದ್ದರೆ, ಕಕಷೇಯನ್ನರು ಮತ್ತು ಮಂಗೋಲಿಯನ್ನರು ಹೆಚ್ಚು ಫಿಯೋಮೆಲನಿನ್ ಹೊಂದಿರುತ್ತಾರೆ.

ತೊನ್ನು ಸಮಸ್ಯೆಗೆ ಅನೇಕ ಕಲ್ಪನೆಗಳ ಕಾರಣಗಳನ್ನು ನೀಡಲಾಗುತ್ತಿದೆ. ಆದರೆ ಅಧ್ಯಯನಗಳು ಬಲವಾಗಿ ಪ್ರತಿಪಾದಿಸಿರುವಂತೆ ಈ ಸ್ಥಿತಿಗೆ ರೋಗ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಬದಲಾವಣೆಗಳೇ ಕಾರಣ. ತೊನ್ನು ಕಲೆಗಳು ಅಭಿವೃದ್ದಿಗೊಳ್ಳುವಲ್ಲಿ ವಂಶವಾಹಿ ಪ್ರಭಾವ ಹಾಗೂ ಪರಿಸರ ಅಂಶಗಳ ಪ್ರಮುಖ ಪಾತ್ರ ವಹಿಸಲಿವೆ.

ಕೆಲವೊಮ್ಮೆ ತೊನ್ನು ಸಮಸ್ಯೆ ಯೊಂದಿಗೆ ಹಾಶಿಮೊಟೋಸ್ ಥೈರಾಯ್ಡಿಟಿಸ್, ಸ್ಕೆಲೆರೋಡೆರ್ಮಾ, ಸಂಧಿವಾತ, ಟೈಪ್ 1 ಡಯಾಬಿಟಿಸ್, ಸೊರಿಯಾಸಿಸ್, ಆಡಿಸನ್ಸ್ ರೋ ಮತ್ತು ಲುಪುಸ್ ಎರಿಥೆಮಟೊಸಸ್‍ನಂತ ಸ್ವಯಂ ಪ್ರತಿರಕ್ಷಣಾ ದೋಷ ಮತ್ತು ಉರಿಯೂತ ರೋಗಗಳೂ ಕಾಣಿಸಿಕೊಳ್ಳುತ್ತವೆ.

ಈ ಸಮಸ್ಯೆಯಿಂದ ಬಳಲುವ ರೋಗಿಗಳು ಖಿನ್ನತೆಯಿಂದ ನರಳುತ್ತಾರೆ. ಹಸು, ಎಮ್ಮೆ, ನಾಯಿ,ಬೆಕ್ಕು ಮತ್ತು ಹಂದಿಗಳಂಥ ಪ್ರಾಣಿಗಳಲ್ಲೂ ಬಿಳಿಚರ್ಮ ದೋಷ ಕಂಡು ಬರುತ್ತದೆ.

ಚಿಹ್ನೆ ಮತ್ತು ಲಕ್ಷಣಗಳು : ವಿಟಿಲ್‍ಗೋ ರೋಗದ ಲಕ್ಷಣಗಳೆಂದರೆ ಬಣ್ಣವಿಲ್ಲದ ಚರ್ಮದ ಪ್ರದೇಶಗಳಲ್ಲಿ ಮಾಸಲು ಅಥವಾ ಬಿಳಿ ಕಲೆಗಳು ಕಂಡು ಬರುತ್ತವೆ. ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಇರುವುದರಿಂದಾಗಿ ಚರ್ಮದ ಸಾಮಾನ್ಯ ಬಣ್ಣಕ್ಕೆ ಕಾರಣವಾಗುತ್ತದೆ. ಮೆಲನಿನ್ ಚರ್ಮಕ್ಕೆ ವರ್ಣವನ್ನು ನೀಡುತ್ತದೆ.

ಚರ್ಮದ ಬಣ್ಣದ ಆಧಾರದ ಮೇಲೆ ಜನಸಂಖ್ಯೆಯನ್ನು ಮೂರು ಗುಂಪುಗಳಾಗಿ ವಿಂಗಡಿಸ ಲಾಗಿದೆ. ಅವರುಗಳೆಂದರೆ ನಿಗ್ರೋಗಳು, ಮಂಗೋಲಿಯನ್ನರು ಮತ್ತು ಕಾಕಷೇಯನ್ನರು. ಯೂಮೆಲನಿನ್ ಮತ್ತು ಫಿಯೊಮೆಲನಿನ್ ಇರುವಿಕೆಯಿಂದಾಗಿ ಆಯಾ ಜನಾಂಗದ ವರ್ಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ವಿಟಿಲ್‍ಗೋನನ್ನು ಎರಡು ಉಪ ವಿಭಾಗಗಳಾಗಿ ವಿಂಗಡಿಸಬಹುದುನಾನ್-ಸೆಗ್‍ಮೆಂಟಲ್ ವಿಟಿಲ್‍ಗೋ (ಎನ್‍ಎಸ್‍ವಿ) ಹಾಗೂ ಸೆಗ್‍ಮೆಂಟಲ್ ವಿಟಿಲ್‍ಗೋ (ಎಸ್‍ವಿ). ನಾನ್-ಸೆಗ್‍ಮೆಂಟಲ್ ವಿಟಿಲ್‍ಗೋದಲ್ಲಿ ಸಾಮಾನ್ಯ ಬಣ್ಣ ಹೋಗಿರುವಿಕೆ ಸ್ಥಳದಲ್ಲಿ ಸಾಮಾನ್ಯವಾಗಿ ಕೆಲವು ಏಕರೂಪತೆ ಕಲೆಗಳು ಕಂಡು ಬರುತ್ತವೆ. ಕಾಲಕ್ರಮೇಣ ಹೊಸ ಕಲೆಗಳು ಸಹ ಕಾಣಿಸಿಕೊಳ್ಳುತ್ತದೆ ಹಾಗೂ ದೇಹದ ದೊಡ್ಡ ಭಾಗದ ಮೇಲೆ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಗೋಚರಿಸುತ್ತದೆ.

ಎಸ್‍ಎಸ್‍ವಿಯನ್ನು ಮತ್ತೆ ಈ ಕೆಳಗಿನಂತೆ ವಿಂಗಡಿಸಬಹುದು : ಸಾಮಾನ್ಯ ಬಿಳಿಚರ್ಮ ಅಥವಾ ವಿಟಿಲ್‍ಗೊ ವಲ್ಗಾರಿಸ್: ಇದೊಂದು ಸಾಮಾನ್ಯ ನಮೂನೆಯಾಗಿದ್ದು, ದೇಹದ ಎಲ್ಲ ಕಡೆ ಸ್ವಾಭಾವಿಕ ಬಣ್ಣ ಹೋದ ಪ್ರದೇಶದಲ್ಲಿ ಕಲೆಗಳು ಕಂಡುಬರುತ್ತವೆ.
ಸಾರ್ವತ್ರಿಕ ತೊನ್ನು : ದೇಹದ ಬಹು ಭಾಗಗಳಲ್ಲಿ ವರ್ಣದ್ರವ್ಯ ಹರಣವಾಗಿರುತ್ತದೆ.
ಫೋಕಲ್ ವಿಟಿಲ್‍ಗೋ: ಒಂದು ಸ್ಥಳದಲ್ಲಿ ಅಥವಾ ಕೆಲವು ಹರಡಿದ ಬಿಳಿ ಕಲೆಗಳು ಕಂಡು ಬರುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಗೋಚರಿಸುತ್ತದೆ.
ಆಕ್ರೋಫೆಸಿಯಲ್ ವಿಟಿಲ್‍ಗೋ : ಮುಖ, ಕೈಗಳು ಅಥವಾ ಪಾದದಲ್ಲಿ ಮಾತ್ರ ಬಿಳಿ ಕಲೆಗಳು ಕಂಡುಬರುತ್ತದೆ.
ಲಿಪ್-ಟಿಪ್ ವೈರಟಿ : ಬಿಳಿ ಕಲೆಗಳು ತುಟಿಗಳು ಹಾಗೂ ಬೆರಳುಗಳ ತುದಿಯಲ್ಲಿ ಮಾತ್ರ ಕಂಡುಬರುತ್ತದೆ.
ಸೆಗ್‍ಮೆಂಟಲ್ ವಿಟಿಲ್‍ಗೋ : ಬೆನ್ನು ಹುರಿ ಯಿಂದ ಬೆನ್ನಿನ ಆಳದೊಂದಿಗೆ ಇರುವ ಚರ್ಮದ ಪ್ರದೇಶದ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ತುಂಬಾ ಸ್ಥಿರವಾಗಿರುತ್ತದೆ. ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತದೆ.
ಚಿಕಿತ್ಸೆ:ತೊನ್ನು ಸೋಂಕು ರೋಗವಲ್ಲ. ಕೆಲವರು ನಂಬಿರುವಂತೆ ಇದು ಹಿಂದಿನ ಜನ್ಮದ ಪಾಪದ ಫಲವೂ ಅಲ್ಲ. ತೊನ್ನು ಇರುವ ವ್ಯಕ್ತಿಗಳೊಂದಿಗೆ ಬೇರೆಯುವುದರಿಂದ ಅವರೊಂದಿಗೆ ಊಟ ಮಾಡುವುದರಿಂದ ರೋಗವು ಹರಡುವುದಿಲ್ಲ.

ಪ್ರತಿ ವರ್ಷ ಜೂ.25ರಂದು ವಿಶ್ವದಾದ್ಯಂತ ವಿಟಿಲ್‍ಗೋ ದಿನವನ್ನು ಆಚರಿಸಲಾಗುತ್ತದೆ.ತೊನ್ನು ರೋಗದ ಕಲೆಗಳು ಕೆಲವೊಮ್ಮೆ ತಾನಾಗಿಯೇ ಕಡಿಮೆಯಾಗುತ್ತದೆ. ರೋಗಿಗಳು ಕಲೆ ಇರುವ ಕಡೆ ಸ್ವಾಭಾವಿಕ ವರ್ಣವನ್ನು ಪಡೆಯಬಹುದು. ಅನೇಕ ಪ್ರಕರಣಗಳಲ್ಲಿ ಬಿಳಿ ಕಲೆಗಳು ಅನೇಕ ವರ್ಷಗಳ ಕಾಲ ಹಾಗೇ ಉಳಿದಿರುತ್ತವೆ.

ಕಲೆಗಳು ದೇಹದ ಎಲ್ಲ ಭಾಗಗಳಿಗೂ ಹಬ್ಬಲು ಕಾರಣವಾಗಬಹುದು. 6 ತಿಂಗಳುಗಳಿಂದ 2-4 ವರ್ಷಗಳ ಕಾಲ ಚಿಕಿತ್ಸೆಯಿಂದ ಸ್ವಾಭಾವಿಕ ಬಣ್ಣವನ್ನು ಮತ್ತೆ ಪಡೆಯಲು ಸಾಧ್ಯವಿದೆ. ಕೆಲವೊಮ್ಮೆ ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದಿಲ್ಲ. ನಿವಾರಣೆ ಚಿಕಿತ್ಸೆಯ ಸಮಯ ಮತ್ತು ಚಿಕಿತ್ಸೆಯ ಸ್ವರೂಪವನ್ನು ತಕ್ಷಣಕ್ಕೆ ತಿಳಿಸುವುದು ಕಷ್ಟವಾಗುತ್ತದೆ.

ಸ್ಟಿರಾಯ್ಡ್‍ಗಳು, ಟ್ಯಾಕ್ರೋಲಿಮಸ್, ಸೋರಾಲೆನ್ಸ್‍ಗಳು ತೊನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಕ್ರಮಬದ್ಧ ಸ್ಟಿರಾಯ್ಡ್‍ಗಳು ಮತ್ತು ಫೋಟೋಥೆರಪಿ ಸಹಕಾರಿಯಾಗುತ್ತದೆ. ವೈದ್ಯಕೀಯ ಚಿಕಿತ್ಸೆ ಪರಿಣಾಮಕಾರಿಯಲ್ಲದ ಪ್ರಕರಣಗಳಲ್ಲಿ ಸೌಂದರ್ಯ ಚಿಕಿತ್ಸೆ, ಕಲೆ ಮರೆಮಾಚುವ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಯನ್ನು ಪ್ರಯತ್ನಿಸಬಹುದಾಗಿದೆ. ತೊನ್ನು ಸಾಮಾಜಿಕ ಹಿಂಜರಿಕೆ ಮತ್ತು ಖಿನ್ನತೆಗೆ ಕಾರಣವಾದರೂ ರೋಗಿಯನ್ನು ಕೊಲ್ಲುವುದಿಲ್ಲ. ಆದರಿಂದ ರೋಗಿಗೆ ಆಪ್ತ ಸಮಾಲೋಚನೆ ಅಗತ್ಯವಿರುತ್ತದೆ.

Facebook Comments