ಕೊರೊನಾ ದಾಳಿ : ಮೊದಲ ವಿಶ್ವಯುದ್ಧದಲ್ಲಿ ಮಡಿದವರಿಗಿಂತ ಹೆಚ್ಚು ಅಮೆರಿಕನ್ನರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಜೂ. 16- ವಿನಾಶಕಾರಿ ಕೋವಿಡ್-19 ವೈರಸ್ ಹೆಮ್ಮಾರಿ ದಾಳಿಯಿಂದ ಹೈರಾಣಾಗಿರುವ ಅಮೆರಿಕಕ್ಕೆ ಗರಬಡಿದಂತಾಗಿದೆ. ಯಾವ ನಿಯಂತ್ರಣಕ್ಕೂ ನಿಲುಕದೇ ಮಹಾಮಾರಿಅಟ್ಟಹಾಸ ಮುಂದುವರಿದಿದೆ.  ಅಮೆರಿಕದಲ್ಲಿ ಮೃತರ ಸಂಖ್ಯೆ 1.20 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ22.09ಲಕ್ಷ ಸನಿಹದಲ್ಲಿದೆ.

ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಪ್ರಥಮ ಮಹಾ ಸಂಗ್ರಾಮದಲ್ಲಿ ಮೃತಪಟ್ಟ ಅಮೆರಿಕದ ಯೋಧರಿಗಿಂತ ಹೆಚ್ಚು ಜನರನ್ನುಕೊರೊನಾ ಬಲಿ ತೆಗೆದುಕೊಂಡಿದೆ. ಮೊದಲ ವಿಶ್ವಯುದ್ದದಲ್ಲಿ ಸುಮಾರು 1.18 ಲಕ್ಷ ಸೈನಿಕರು ಸಾವಿಗೀಡಾಗಿದ್ದರು. ಕಳೆದ ಏಪ್ರಿಲ್‍ನಲ್ಲೇ ವಿಯೆಟ್ನಾಂಯುದ್ಧದಲ್ಲಿ ಅಸುನೀಗಿದ ಅಮೆರಿಕಯೋಧರಿಗಿಂತ ಹೆಚ್ಚು ಮಂದಿಯನ್ನು ವೈರಸ್ ನುಂಗಿ ಹಾಕಿತ್ತು.

ನಿನ್ನೆಒಂದೇ ದಿನ ಅಮೆರಿಕದಲ್ಲಿ 740 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇಅವಧಿಯಲ್ಲಿ 23,350 ಜನರು ರೋಗಪೀಡಿತರಾಗಿದ್ದಾರೆ.  ಅಗೋಚರ ವೈರಸ್‍ವಿಶ್ವದಮಹಾ ಶಕ್ತಿಶಾಳಿದೇಶವನ್ನುಹಿಂಡಿ ಹಿಪ್ಪೆ ಮಾಡುತ್ತಿದ್ದು, ಸೋಂಕು ಮತ್ತು ಸಾವು ಪ್ರಮಾಣದಲ್ಲಿಏರಿಳಿತಗಳ ನಡುವೆಯೂಅಗ್ರಸ್ಥಾನದಲ್ಲೇ ಮುಂದುವರಿದಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರಅಮೆರಿಕದಲ್ಲಿಈವರೆಗೆ 1,19,132 ಮಂದಿ ಮೃತಪಟ್ಟಿದ್ದು,ಇಂದು ಬೆಳಗಿನ ಮಾಹಿತಿ ಪ್ರಕಾರ ಮರಣ ಪ್ರಮಾಣ 1.20 ಲಕ್ಷದಾಟುತ್ತಿದೆ. ಅಲ್ಲದೇ ಈವರೆಗೆ 22,08,400 ಅಮೆರಿಕನ್ನರು ಸಾಂಕ್ರಾಮಿಕರೋಗ ಪೀಡಿತರಾಗಿದ್ದಾರೆ.

ಇವರಲ್ಲಿ ಸುಮಾರು 17,000 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 9,03,041ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ಧಾರೆ, ಗುಣಮುಖರಾಗಿದ್ದಾರೆ.

ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್‍ಎರಡನೇ ಸ್ಥಾನದಲ್ಲಿದೆ. ಆ ರಾಷ್ಟ್ರದಲ್ಲಿ ಸುಮಾರು 9.29ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ45,456ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಭಾರತ ಮತ್ತು ಬ್ರಿಟನ್ ದೇಶಗಳಿವೆ.

Facebook Comments