ರಷ್ಯಾದಲ್ಲಿ ಪ್ರಥಮ ಮಹಾ ಸಂಗ್ರಾಮ ಸನ್ನಿವೇಶಗಳ ಮರು ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬುದೊಂದು ಗಾದೆ ಮಾತು. ಆದರೆ, ರಷ್ಯಾದ ಕಾಲಿನ್‍ಇನ್‍ಗ್ರಾಡ್ ನಗರಿಯಲ್ಲಿ ಚರಿತ್ರೆಯ ಪ್ರಮುಖ ಘಟನೆಯೊಂದರ ದೃಶ್ಯ ಸನ್ನಿವೇಶಗಳು ಮರುಸೃಷ್ಟಿಯಾಗಿ ನೋಡುಗರನ್ನು ಚಕಿತಗೊಳಿಸಿದವು. ಪ್ರಥಮ ಮಹಾ ಸಂಗ್ರಾಮ ಅನೇಕ ರೋಚಕ ಕಾದಾಟಗಳಿಗೆ ಸಾಕ್ಷಿಯಾಗಿದೆ.

ಚಕ್ರಾಧಿಪತ್ಯ ಸ್ಥಾಪನೆಗಾಗಿ ರಷ್ಯಾ ಮತ್ತು ಜರ್ಮನಿ ನಡುವೆ ನಡೆದ ಪ್ರಥಮ ಮಹಾ ಯುದ್ಧದ ದೃಶ್ಯಗಳನ್ನು ನೋಡಲು ಅವಕಾಶ ರಷ್ಯನ್ನರಿಗೆ ಲಭಿಸಿತು. ಕಾಲಿನ್‍ಇನ್‍ಗ್ರಾಡ್ ನಗರಿಯಲ್ಲಿ ಇದಕ್ಕಾಗಿ ರಣರಂಗ ಸದೃಶ ವಾತಾವರಣ ಸೃಷ್ಟಿಸಲಾಗಿತ್ತು. ಜರ್ಮನ್ ಮತ್ತು ರಷ್ಯನ್ ಯೋಧರ ಸಮವಸ್ತ್ರಗಳನ್ನು ಧರಿಸಿದ ಮಂದಿ ಗಂಬಿನೆನ್ ಸಂಗ್ರಾಮದ ಅಣಕು ಯುದ್ದದಲ್ಲಿ ಪಾಲ್ಗೊಂಡರು.

ಗುಂಡಿನ ಚಕಮಕಿ, ಫಿರಂಗಿಗಳಿಂದ ದಾಳಿ ಈ ದೃಶ್ಯಗಳು ಅಲ್ಲಿ ಮರು ನಿರ್ಮಾಣಗೊಂಡವು. ಸಂಗ್ರಾಮ ಆರಂಭವಾದ ಮೊದಲ ದಿನಗಳಲ್ಲಿ ಪೂರ್ವ ಸೇನಾ ಪಡೆಗಳ ಮೇಲೆ ರಷ್ಯಾ ಗೆಲುವು ಸಾಧಿಸಿತು. ಈ ಯಥಾವತ್ ಸನ್ನಿವೇಶ ನೂರಾರು ವೀಕ್ಷಕರಿಗೆ ದ್ವಿತೀಯ ಮಹಾ ಸಮರದ ಗತಯುದ್ಧವನ್ನು ನೆನಪಿಸಿದವು. ಈ ಅಣಕು ಸಮರದಲ್ಲಿ ಅಶ್ವಪಡೆಗಳೂ ಸಹ ಭಾಗವಹಿಸಿದ್ದವು.

ಈ ಸಮರ ಪ್ರತಿಸೃಷ್ಟಿಯಲ್ಲಿ ಭಾಗವಹಿಸಲು ಅಶ್ವಗಳಿಗೆ ಸಾಕಷ್ಟು ತರಬೇತಿ ನೀಡಲಾಗಿತ್ತು ಎನ್ನುತ್ತಾರೆ. ಯೋಧನ ಪಾತ್ರ ನಿರ್ವಹಿಸಿದ್ದ ಮಿಖಾಯಿಲ್ ವೊಲೊಶಿನ್. ನಂತರ ಮುಂದುವರಿದ ಒಂದನೇ ಮಹಾ ಸಂಗ್ರಾಮದಲ್ಲಿ ಟನ್ನೆನ್‍ಬರ್ಗ್ ಬ್ಯಾಟಲ್‍ನಲ್ಲಿ ಜರ್ಮನ್ ಪಡೆಗಳು ರಷ್ಯಾ ವಿರುದ್ಧ ಮೇಲುಗೈ ಸಾಧಿಸಿದವು.

Facebook Comments