ಈ ಅಂಡರ್ ವಾಟರ್ ವಿಲ್ಲಾದಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ 36.67 ಲಕ್ಷ ರೂ..!

ಈ ಸುದ್ದಿಯನ್ನು ಶೇರ್ ಮಾಡಿ

UNDER WATERನಯನ ಮನೋಹರ ದ್ವೀಪರಾಷ್ಟ್ರ ಮಾಲ್ಡಿವ್ಸ್ ನಲ್ಲಿ ವಿಶ್ವದ ಪ್ರಪ್ರಥಮ ವಿಲ್ಲಾ (ಐಷಾರಾಮಿ ಬಂಗಲೆ) ನಿರ್ಮಾಣವಾಗಿದೆ. ಹಿಂದೂ ಮಹಾಸಾಗರದಲ್ಲಿ ಇರುವ ಎರಡು ಅಂತಸ್ತುಗಳ ಈ ವಿಲ್ಲಾದಲ್ಲಿ ಒಂದು ರಾತ್ರಿ ವಾಸ್ತವ್ಯ ಹೂಡಲು 50,000 ಡಾಲರ್‍ಗಳು(36.67 ಲಕ್ಷ ರೂ.ಗಳು) ತೆರಬೇಕಾಗುತ್ತದೆ..!!  ಸಾಗರದ ಮೇಲೆ ಮತ್ತು ಒಳಗೆ ಇರುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಎರಡು ಅಂತಸ್ತುಗಳ ಈ ವಿಲ್ಲಾದಲ್ಲಿ ಒಂದು ಹೈಟೆಕ್ ಜಿಮ್, ಸುಸಜ್ಜಿತ ಬಾರ್, ಸ್ಫಟಿಕ ಶುಭ್ರ ಈಜುಕೊಳ, ಅತ್ಯಾಧುನಿಕ ಪಾಕಶಾಲೆ, ಪಾರ್ಟಿ ಮಾಡಲು ಜಲಾವೃತ ಗಾಜಿನ ಮನೆ. ದುಬಾರಿ ಸ್ನಾನಗೃಹ ಹಾಗೂ ವೈಭವೋಪೇತ ಶಯನಗೃಹವಿದೆ. ಈ ಬಂಗಲೆಯ ಯಾವುದೇ ಭಾಗದಿಂದಲೂ ಸಮುದ್ರದ ಮತ್ಸ್ಯ ಲೋಕದ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ತುಂಬಾ ದುಬಾರಿ ಯಾದರೂ ಸರಿ ಸಕಲ ಸೌಲಭ್ಯ ಗಳ ಪ್ರಶಾಂತ ವಾತಾವರಣ ಬಯಸುವ ಮಂದಿಗಾಗಿಯೇ ನಿರ್ಮಾಣ ವಾಗಿರುವ ಜಗತ್ತಿನ ಪ್ರಥಮ ಅಂಡರ್‍ ವಾಟರ್ ವಿಲ್ಲಾದ ಹೆಸರು ಮುರಕ. ಸ್ಥಳೀಯ ಧಿವೇಹಿ ಭಾಷೆಯಲ್ಲಿ ಹವಳ ಎಂಬುದು ಇದರರ್ಥ. ಕೋನ್‍ರ್ಯಾಡ್ ಮಾಲ್ಡಿವ್ಸ್ ರಂಗಲಿ ಐಲ್ಯಾಂಡ್
ರೆಸಾರ್ಟ್‍ನ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ.
ಹಿಂದು ಮಹಾಸಾಗರದ 16 ಅಡಿಗಳ ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿಲ್ಲಾದ ಮೇಲ್ಭಾಗ ಸಮುದ್ರದ ಮೇಲೆ ತೇಲುವ ಬಂಗಲೆಯಂತೆ ಕಾಣುತ್ತದೆ. ಒಳಗೆ ಇಳಿದರೆ ಹೊಸ ಸಾಗರಲೋಕವೇ ಅನಾವರಣಗೊಳ್ಳುತ್ತದೆ. ಇಲ್ಲಿ ಒಂದು ರಾತ್ರಿ ತಂಗಲು 36.67 ಲಕ್ಷ ರೂ.ಗಳು. ಕನಿಷ್ಠ ನಾಲ್ಕು ದಿನಗಳು ಮಟ್ಟಿಗೆ ಬುಕ್ ಮಾಡಬೇಕೆಂಬ ನಿಯಮವಿದೆ. ಈ ರೆಸಾರ್ಟ್ ಈಗಾಗಲೇ ಸಮುದ್ರದೊಳಗೆ ಇಥಾ ಎಂಬ ಪಂಚತಾರಾ ರೆಸ್ಟೋರೆಂಟ್ ಹೊಂದಿದೆ. ಸಮುದ್ರದಾಳದ ನೌಕೆ ಮೂಲಕ ಮುರಕದಿಂದ ಅಲ್ಲಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೂ ಇದೆ.

ಅಚ್ಚರಿಯ ಸಂಗತಿ ಎಂದರೆ ಈ ವಿಲ್ಲಾವನ್ನು ಸಿಂಗಪುರ್ ದ್ವೀಪದಲ್ಲಿ ನಿರ್ಮಿಸಿ ಆನಂತರ ವಿಶೇಷವಾಗಿ ನಿರ್ಮಿಸಿದ ನೌಕೆ ಮೂಲಕ ಮಾಲ್ಡಿವ್ಸ್‍ಗೆ ತರಲಾಯಿತು. ನಂತರ ಇಡೀ ಬಂಗಲೆಯನ್ನು ನೀರಿನೊಳಗೆ ಮುಳುಗಿಸಿ ಭದ್ರ ಆಧಾರದ ಮೇಲೆ ನಿಲ್ಲಿಸಲಾಗಿದೆ. ಪ್ರಬಲ ಅಲೆಗಳು ಅಥವಾ ಸಾಗರ ಗರ್ಭದ ಸುಂಟರ ಗಾಳಿಯನ್ನು ತಡೆ ಯುವ ಸಾಮಥ್ರ್ಯ ಇದಕ್ಕಿದೆ.

Facebook Comments