ಮನುಷ್ಯ 150 ವರ್ಷ ಬದುಕಬಹುದೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬ್ರಿಗ್ಟನ್,ಜೂ.9-ಒಬ್ಬ ಮನುಷ್ಯನ ಆಯುಷ್ಯ ಎಷ್ಟಿರಬಹುದು? 100 ವರ್ಷ ಎನ್ನುವ ನಿಮ್ಮ ಉತ್ತರ ಸರಿ ಇರಬಹುದು ಆದರೆ, ಕೆಲ ದೇಶಗಳಲ್ಲಿ ನೂರು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಇನ್ನು ಬದುಕಿರುವುದರಿಂದ ಮನುಷ್ಯನ ಸರಾಸರಿ ಆಯುಷ್ಯ 150 ವರ್ಷ ಇರಬಹುದೇ ಎಂಬ ಅನುಮಾನ ಕಾಡುತ್ತಿದೆ.

ಏಕೆ ಎಂದರೆ ಫ್ರೆಂಚ್ ಮೂಲದ ಮಹಿಳೆಯೊಬ್ಬರು ತಮ್ಮ 122ನೇ ವಯಸ್ಸಿನಲ್ಲೂ ಇನ್ನು ಆರೋಗ್ಯವಾಗಿರುವುದು ಇಂತಹ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. 1875ರಲ್ಲಿ ಜನಿಸಿರುವ ಜೆನ್ನಿ ಕಾಲ್ಮೆಂಟ್ ಎಂಬ ಮಹಿಳೆ ಇನ್ನು ಕೆಲ ವರ್ಷ ಬದುಕಿರುತ್ತಾರಂತೆ.

ಒಕಿನೋವಾ, ಜಪಾನ್, ಸರ್ದಿಯಾನಾ,ಇಟಲಿ ಮತ್ತಿತರ ಕೆಲ ರಾಷ್ಟ್ರಗಳಲ್ಲಿ ಕೆಲವರು ನೂರು ವರ್ಷ ಮೇಲ್ಟಟ್ಟು ಜೀವಿಸಿರುವ ಉದಾಹರಣೆಗಳಿವೆ. ಇದೀಗ ಫ್ರೆಂಚ್ ಮಹಿಳೆ 122 ವರ್ಷದಲ್ಲೂ ಇನ್ನು ಗಟ್ಟಿಮುಟ್ಟಾಗಿರುವುದರಿಂದ ಮನುಷ್ಯನ ನಿಜವಾದ ಆಯುಷ್ಯ ಎಷ್ಟು ಎಂಬ ಪ್ರಶ್ನೆ ಎದುರಾಗುವುದು ಸಹಜ.

ಈ ಹಿಂದೆ ನಡೆಸಿದ್ದ ಕೆಲ ಸಂಶೋಧನೆಗಳು ಮನುಷ್ಯ 140 ವರ್ಷದವರೆಗೆ ಬದುಕಬಹುದು ಎಂದು ಅಂದಾಜಿಸಿದ್ದವು. ಇದೀಗ ಹೊಸ ಸಂಶೋಧನೆಯಲ್ಲಿ ಒಬ್ಬ ಮನುಷ್ಯ 150 ವರ್ಷದವರೆಗೆ ಜೀವಿಸಬಹುದು ಎನ್ನುವುದು ಪತ್ತೆಯಾಗಿದೆ.

ಹಾಗಂತ ಉಡಾಫೆ ಜೀವನ ಮಾಡಿದೆ ಇದು ಸಾಧ್ಯವಿಲ್ಲ. ಕಷ್ಟಪಟ್ಟು ದುಡಿದು, ಆರೋಗ್ಯವಂತ ಜೀವನ ನಡೆಸುವುದರೀಂದ ಮಾತ್ರ ಶತಾಯುಷಿಗಳಾಗಿ ಬದುಕಬಹುದು ಎನ್ನುವುದನ್ನು ಯಾರು ಮರೆಯುವಂತಿಲ್ಲ.

Facebook Comments

Sri Raghav

Admin