ಇದೆ ನೋಡಿ ವಿಶ್ವದ ಅತ್ಯಂತ ಪುಟ್ಟ ಹಾರುವ ಕಾರು..!

ಈ ಸುದ್ದಿಯನ್ನು ಶೇರ್ ಮಾಡಿ

ಜಪಾನ್, ಅ.1- ಇದು ವಿಶ್ವದ ಅತ್ಯಂತ ಪುಟ್ಟ ಹಾರುವ ಕಾರು! ಅತ್ಯಾಧುನಿಕ ತಂತ್ರಜ್ಞಾನಗಳ ಅನ್ವೇಷಣೆಗಳಲ್ಲಿ ಜಪಾನ್ ಸದಾ ಒಂದು ಹೆಜ್ಜೆ ಮುಂದು. ಉದಯರವಿ ನಾಡಿನಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಹೊಸ ಹಾರುವ ಕಾರು ಎಲ್ಲರ ಗಮನ ಸೆಳೆಯುತ್ತಿದೆ.

ಜಪಾನಿನ ನವೋದ್ಯಮ ಸಂಸ್ಥೆಯೊಂದು ಅತ್ಯಾಧುನಿಕ ತಂತ್ರಜ್ಞಾನದ ಅತ್ಯಂತ ಪುಟ್ಟ ಹಾರುವ ಕಾರೊಂದನ್ನು ಅಭಿವೃದ್ದಿಗೊಳಿಸಿದೆ. ಈ ಕಾರಿನ ಪ್ರಥಮ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

ಪುಟ್ಟ ಹೆಲಿಕಾಪ್ಟರ್ ಮತ್ತು ಕಾರಿನ ಸಂಯೋಜನೆಯಂತಿರುವ ಈ ಹಾರುವ ವಾಹನವನ್ನು ಪೈಲೆಟ್ ಲಘು ಅವಗಾಗಿ ಪ್ರಯೋಜಕ್ಕೆ ಒಳಪಡಿಸಿದ. ಫ್ಲೈಯಿಂಗ್ ಕಾರಿನ ಚೊಚ್ಚಲ ಹಾರಾಟ ಪರೀಕ್ಷೆಯ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಉದಯರವಿ ನಾಡು ಜಪಾನ್ ರಾಜಧಾನಿ ಟೋಕಿಯೋದ ಸ್ಕೈ ಡ್ರೈವ್ ಸಂಸ್ಥೆ ಎಸ್‍ಡಿ-03 ಮಾದರಿಯ ಹಾರುವ ಕಾರನ್ನು ಟೆಸ್ಟ್ ಸೈಟ್‍ನಲ್ಲಿ ಪರೀಕ್ಷೆಗೆ ಒಳಪಡಿಸಿತು. ಈ ವಾಹನವು ಭೂಮಿಯಿಂದ ಮೇಲೇರಿ ನಾಲ್ಕು ನಿಮಿಷಗಳ ಕಾಲ ಯಶಸ್ವಿ ಹಾರಾಟ ನಡೆಸಿದೆ.

ಇದು ವಿಶ್ವದ ಅತ್ಯಂತ ಪುಟ್ಟ ಹಾರುವ ಕಾರು ಎಂದು ಸಂಸ್ಥೆ ಹೇಳಿಕೊಂಡಿದೆ. ನಾಲ್ಕು ಮೀಟರ್ ಉದ್ದ ಮತ್ತು ನಾಲ್ಕು ಮೀಟರ್ ಅಗಲ ಇರುವ ಈ ಫ್ಲೈಯಿಂಗ್ ಕಾರು ಎರಡು ಮೀಟರ್ ಎತ್ತರವಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಎರಡು ಕಾರುಗಳು ನಿಲ್ಲುವಷ್ಟು ಸ್ಥಳದಲ್ಲಿ ಇಳಿಯಬಹುದಾದ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

Facebook Comments

Sri Raghav

Admin