ವಿಶ್ವದಾದ್ಯಂತ 1.66 ಲಕ್ಷ ಜನರನ್ನು ಕೊಂದು ಹಾಕಿದ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರೋಮ್/ಮ್ಯಾಡ್ರಿಡ್, ಏ.20- ವಿನಾಶಕಾರಿ ಕೊರೊನಾ ಇಡೀ ಲೋಕಕ್ಕೆ ಕಂಟಕವಾಗಿಯೇ ಮುಂದುವದಿದ್ದು, ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ. ಜಗತ್ತಿನಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ದಿನನಿತ್ಯದ ಸುದ್ದಿಯಾಗುತ್ತಿದೆ.

ಈವರೆಗೆ ಸುಮಾರು 1.66 ಲಕ್ಷ ಜನರನ್ನು ವೈರಸ್ ತಿಂದು ತೇಗಿದೆ.. ಅಲ್ಲದೇ ಸೋಂಕಿರ ಸಂಖ್ಯೆ 25 ಲಕ್ಷ ಸನಿಹದಲ್ಲಿದೆ. 42,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಯುರೋಪ್ ಖಂಡದಲ್ಲಿಯೂ ರಣಕೇಕೆ ಮುಂದುವರಿಸಿವೆ.

ಯುರೋಪ್‍ನಲ್ಲಿ 40ಕ್ಕೂ ಹೆಚ್ಚು ರಾಷ್ಟ್ರಗಳು ಕೋವಿಡ್-19 ಹಾವಳಿಯಿಂದ ಬಾಧಿತವಾಗಿದ್ದು, ಸುಮಾರು 66,000 ಮಂದಿ ಬಲಿಯಾಗಿದ್ದು, 13 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಪ್ರವಾಸಿಗರ ಸ್ವರ್ಗ ಸೀಮೆ ಇಟಲಿಯಲ್ಲಿ ಸತ್ತವರ ಸಂಖ್ಯೆ 24,000 ದಾಟಿರುವುದು ಆತಂಕದ ಸಂಗತಿಯಾಗಿದೆ.

ಯೂರೋಪ್ ಖಂಡದಲ್ಲಿ ಇಟಲಿ ನಂತರ ಸ್ಪೇನ್ ಸಾವು ಮತ್ತು ಸೋಂಕಿನಲ್ಲಿ ಎರಡನೆ ಸ್ಥಾನದಲ್ಲಿದೆ. ಅಲ್ಲಿ ಈವರೆಗೆ 22,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಂಗ್ಲೆಂಡ್‍ನಲ್ಲಿಯೂ ಸಾವು ಮತ್ತು ಸೋಂಕು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಬ್ರಿಟನ್‍ನಲ್ಲಿ ಸತ್ತವರ ಸಂಖ್ಯೆ 16,000 ದಾಟಿದೆ. ಸುಮಾರು 99 ಲಕ್ಷಕ್ಕೂ ಅಧಿಕ ರೋಗಿಗಳು ನರಳುತ್ತಿದ್ದಾರೆ.

ಜರ್ಮನಿ, ನೆದರ್‍ಲೆಂಡ್ ಮತ್ತಿತ್ತರ ದೇಶಗಳಲ್ಲಿಯೂ ಸಾವು ಮತ್ತು ಸೋಂಕಿ ಪ್ರಮಾಣ ಹೆಚ್ಚಾಗುತ್ತಿದೆ. ವಿಶ್ವದ ಯಾವ ಖಂಡಗಳೂ ಕೊರೊನಾ ಕಬಂಧ ಬಾಹುಗಳಿಗೆ ಮುಕ್ತವಾಗಿಲ್ಲ. ಬಹುತೇಕ ದೇಶಗಳಲ್ಲಿಯೂ ಹೊಸ ಹೊಸ ಕೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ.

ವಿಶ್ವದ ಕೆಲವು ದೇಶಗಳಲ್ಲಿ ಈವರೆಗೆ 6.16 ಲಕ್ಷಕ್ಕೂ ಅಧಿಕ ಮಂದಿ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿರುವುದು ಸ್ವಲ್ಪ ಸಮಾಧಾನಕರ ಸಂಗತಿ.
ಶರವೇಗದಲ್ಲಿ ಆಕ್ರಮಣ ಮುಂದುವರಿಸುತ್ತಿರುವ ಹೆಮ್ಮಾರಿಗೆ ಅಂಕುಶ ಹಾಕಲು ಇಡೀ ವಿಶ್ವವದೇ ಸಂಘಟಿತ ಹೋರಾಟ ನಡೆಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ. ಮುಂದೇನು ಎಂಬ ಚಿಂತೆ ವಿಶ್ವವ್ಯಾಪಿ ಕಾಡುತ್ತಿದೆ.

Facebook Comments

Sri Raghav

Admin