ವಿಶ್ವದಾದ್ಯಂತ ಕೊರೊನಾಗೆ 3.44 ಲಕ್ಷ ಮಂದಿ ಬಲಿ, 54 ಲಕ್ಷ ಸೋಂಕಿತರು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ, ಮೇ 24- ಅಪಾಯಕಾರಿ ಕೊರೊನಾ ವೈರಾಣು ದಾಳಿ ವಿಶ್ವಾದ್ಯಂತ ಮತ್ತಷ್ಟು ತೀವ್ರಗೊಂಡಿದೆ. ಈ ಹೆಮ್ಮಾರಿಯ ಕಬಂಧ ಬಾಹುಗಳಲ್ಲಿ ಸುಮಾರು 250 ದೇಶಗಳು ನಲುಗುತ್ತಿವೆ, ಕೊರೊನಾ ಕೂಪದಲ್ಲಿ ಜಗತ್ತೇ ಕಂಗಲಾಗಿದೆ.

ಈವರೆಗೆ 3.40 ಲಕ್ಷ ಜನರನ್ನು ಹೆಮ್ಮಾರಿ ಬಲಿ ಪಡೆದಿದೆ. ಅಲ್ಲದೇ ಸುಮಾರು 54 ಲಕ್ಷ ಮಂದಿ ಸೋಂಕು ರೋಗದಿಂದ ಬಳಲುತ್ತಿದ್ದಾರೆ.
ಆತಂಕಕಾರಿ ಸಂಗತಿ ಎಂದರೆ ಕಳೆದ 24 ತಾಸುಗಳಲ್ಲಿ ವಿಶ್ವದಾದ್ಯಂತ 1 ಲಕ್ಷಕ್ಕೂ ಅಕ ಮಂದಿಗೆ (ಸೋಂಕು ತಗುಲಿದೆ. ಕಳೆದ ಐದು ದಿನಗಳಿಂದ ಜಗತ್ತಿನಾದ್ಯಂತ ಸರಾಸರಿ 1 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ದಿನ ನಿತ್ಯ ಪಾಸಿಟಿವ್ ಕೇಸ್‍ಗಳು ವ್ಯಾಪಕವಾಗಿ ಹೆಚ್ಚಾಗುತ್ತಿದೆ.

ಜಗತ್ತಿನಾದ್ಯಂತ ಈವರೆಗೆ 3.44,015 ಮಂದಿ ಸಾವಿಗೀಡಾಗಿದ್ದು, 54,07,350 ಸೋಂಕು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗ ಪೀಡಿತರಲ್ಲಿ ಸುಮಾರು 53,500ಕ್ಕೂ ಮಂದಿ ಸ್ಥಿತಿ ಗಂಭೀರವಾಗಿದ್ದು, ಮರಣ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಇಂದು ರಾತ್ರಿ ವೇಳೆಗೆ ಮೃತರ ಸಂಖ್ಯೆ 3.50 ಲಕ್ಷ ಮತ್ತು ಸೋಂಕಿತರ ಸಂಖ್ಯೆ 55 ಲಕ್ಷ ಮೀರುವ ಆತಂಕವಿದೆ.ಈ ಮಧ್ಯೆ, ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ ವೃದ್ದಿ ಕಂಡುಬಂದಿವೆ. 22,47,895 ಮಂದಿ ಸೋಂಕು ಪೀಡಿತರು ಚೇತರಿಸಿಕೊಂಡಿರುವುದು ಮತ್ತು ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್, ಮತ್ತು ಇಂಗ್ಲೆಂಡ್ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ. ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಟರ್ಕಿ ಮತ್ತು ಇರಾನ್ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ.

ಏಷ್ಯಾ ಖಂಡದಲ್ಲಿ ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ಕಂಡುಬರುತ್ತಿವೆ.

ಜಗತ್ತಿನ 250ಕ್ಕೂ ಹೆಚ್ಚು ದೇಶಗಳು ಸತತ ಐದು ತಿಂಗಳುಗಳಿಂದ ಕೊರೊನಾ ನಿಗ್ರಹಕ್ಕಾಗಿ ನಿರಂತರ ಹೋರಾಟ ಮುಂದುವರಿಸಿದ್ದರೂ ಹೆಮ್ಮಾರಿ ನಿಯಂತ್ರಣ ಸಾಧ್ಯವಾಗದಿರುವುದು ಭಾರೀ ಕಳವಳಕಾರಿಯಾಗಿದೆ.

ಚೀನಾ, ಅಮೆರಿಕ, ಇಸ್ರೇಲ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಭಾರತ ಸೇರಿದಂತೆ ಅನೇಕ ದೇಶಗಳ ಕಿಲ್ಲರ್ ವೈರಸ್ ನಿಯಂತ್ರಣಕ್ಕಾಗಿ ಔಷಗಳು ಮತ್ತು ಲಸಿಕೆಗಳನ್ನು ಅನ್ವೇಷಣೆ ಮಾಡಿದ್ದರೂ, ಅವು ಇನ್ನೂ ಕೆಲವು ಹಂತಗಳ ಪ್ರಯೋಗಕ್ಕೆ ಒಳಪಡಬೇಕಿದೆ.

Facebook Comments

Sri Raghav

Admin