ವಿಶ್ವದಾದ್ಯಂತ 1.71 ಕೋಟಿ ಮಂದಿಗೆ ಕೊರೋನಾ, 6.70 ಲಕ್ಷ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ, ಜು.30- ಕಿಲ್ಲರ್ ಕೊರೊನಾ ಹಾವಳಿ ಇಡೀ ಜಗತ್ತಿಗೇ ಕಂಟಕವಾಗಿ ಪರಿಣಮಿಸಿದ್ದು, ರೋಗಿಗಳು ಮತ್ತು ಮೃತರÀ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ.

ಜಗತ್ತಿನಾದ್ಯಂತ ರೋಗಪೀಡಿತರ ಸಂಖ್ಯೆ 1.71 ಕೋಟಿ ಹಾಗೂ ಒಟ್ಟು ಸಾವಿನ ಸಂಖ್ಯೆ 6.70 ಲಕ್ಷ ದಾಟಿದೆ.ಇದರ ನಡುವೆಯೂ ವಿಶ್ವದಲ್ಲಿ ಸುಮಾರು 1.07 ಕೋಟಿ ರೋಗಿಗಳು ಗುಣಮುಖರಾಗಿದ್ದಾರೆ.

ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ 6,70,256 ಮಂದಿ ಸಾವಿಗೀಡಾಗಿದ್ದು, 1,71,89,755 ಸೋಂಕು ಪ್ರಕರಣಗಳು ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 58.18 ಲಕ್ಷ ದಾಟಿದೆ. ಅಲ್ಲದೇ ಇನ್ನೂ 66,385ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.

ನಾಳೆ ವೇಳೆಗೆ ಸಾವಿನ ಸಂಖ್ಯೆ 6.90 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 1.80 ಕೋಟಿ ದಾಟುವ ಆತಂಕವಿದೆ.ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ.

ವಿಶ್ವದಲ್ಲಿ ಈವರೆಗೆ 1,07,01,144 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ.ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ, ಮತ್ತು ದಕ್ಷಿಣ ಆಫ್ರಿಕಾ ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ  ಏಷ್ಯಾದಲ್ಲೇ ಈವರೆಗೆ 1.32 ಕೋಟಿಗೂ ಅಧಿಕ ಮಂದಿಯಲ್ಲಿ ಸೋಂಕು ವರದಿಯಾಗಿದೆ.

Facebook Comments

Sri Raghav

Admin