ಸಿಜೆಐ ಲೈಂಗಿಕ ಕಿರುಕುಳ : ಸುಪ್ರೀಂ ಮಾಜಿ ನ್ಯಾಯಾಧೀಶರಿಂದ ತನಿಖೆಗೆ ಎಜಿ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 11- ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಿನಕ್ಕೊಂದು ಹೊಸ ತಿರುವ ಪಡೆಯುತ್ತಿದೆ. ತನಿಖೆ ನಡೆಸಲು ಸರ್ವೋಚ್ಛ ನ್ಯಾಯಾಲಯದ ಆಂತರಿಕ ಸಮಿತಿ ರಚನೆಯಾಗುವುದಕ್ಕೆ ಮುನ್ನವೇ ಮೂವರು ಮಾಜಿ ನ್ಯಾಯಾಧೀಶರ ಸಮಿತಿಯನ್ನು ರಚಿಸಲು ಸುಪ್ರೀಂ ಕೋರ್ಟ್‍ನ ಎಲ್ಲ ನ್ಯಾಯಾಧೀಶರಿಗೆ ತಾವು ಪತ್ರಬರೆದು ತಿಳಿಸಿದ್ದಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ.

ಸರ್ಕಾರದೊಂದಿಗೆ ಈ ಸಂಬಂಧ ಇರುವ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿರುವ ವೇಣುಗೋಪಾಲ್ ನಾನು ಪತ್ರವನ್ನು ಬರೆದಿದ್ದೇನೆ ಎಂಬುದನ್ನು ಹೊರತಾಗಿ ಈ ಕುರಿತು ಪ್ರಕಟವಾಗಿರುವ ವರದಿಯಲ್ಲಿನ ಅಂಶಗಳು ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಜೆಐ ಗೊಗಯ್ ವಿರುದ್ಧ ಸುಪ್ರೀಂ ಕೋರ್ಟ್‍ನ ಸೇವೆಯಿಂದ ವಜಾಗೊಂಡ ಮಹಿಳಾ ಉದ್ಯೋಗಿಯೊಬ್ಬರು ಮಾಡಿರುವ ಆರೋಪಗಳ ವಿಚಾರಣೆಗೆ ನ್ಯಾಯಮೂರ್ತಿ ಎಸ್. ಎ.ಬೋಬ್ಡೆ ನೇತೃತ್ವದ ಮೂವರು ಸದಸ್ಯರ ಆಂತರಿಕ ಸಮಿತಿ ರಚನೆಯಾಗುವ ಮುನ್ನವೇ ಏ. 22 ರಂದು ತಾವು ಪತ್ರವನ್ನು ಬರೆದಿದ್ದಾಗಿ ವೇಣುಗೋಪಾಲ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಮೂವರು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಆಂತರಿಕ ತನಿಖಾ ಸಮಿತಿಯ ನೇಮಕಾತಿಗೆ ಮುಂಚಿತವಾಗಿ ನಾನು ಪತ್ರವೊಂದನ್ನು ಬರೆದಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಅಟಾರ್ನಿ ಜನರಲ್ ತಿಳಿಸಿದ್ದಾರೆ.

ಮಹಿಳೆಯಿಂದ ಕೇಳಿಬಂದ ಆರೋಪದ ತನಿಖೆ ನಡೆಸಿದ್ದ ಆಂತರಿಕ ಸಮಿತಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಯಾವುದೇ ಸತ್ಯಾಂಶಗಳು ಪತ್ತೆಯಾಗಿಲ್ಲ ಎಂದು ಮೇ 6 ರಂದು ಸಿಜೆಇ ರಂಜನ್ ಗೊಗೊಯ್ ಅವರಿಗೆಗೆ ಕ್ಲೀನ್ ಚಿಟ್ ನೀಡಿದೆ. ಏ. 23ರಂದು ರಚನೆಯಾಗಿದ್ದ ಮೂವರು ಸದಸ್ಯರ ಆಂತರಿಕ ತನಿಖಾ ಸಮಿತಿ ತನ್ನ ಕಾರ್ಯವನ್ನು 14 ದಿನಗಳಲ್ಲಿ ಪೂರ್ಣಗೊಳಿಸಿದೆ.

Facebook Comments

Sri Raghav

Admin