ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(ಕೆಎಸ್‌ಪಿ)ಯಲ್ಲಿ ಖಾಲಿ ಇರುವ 2013 ಸಿವಿಲ್ ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 17-10-2019ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ಕೆಎಸ್‌ಪಿ)ಯಲ್ಲಿ ಖಾಲಿ ಇರುವ 2013 ಸಿವಿಲ್ ಕಾನ್‌ಸ್ಟೆಬಲ್ (ಪುರುಷ-ಸ್ತ್ರೀ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಸಂಸ್ಥೆಯಿಂದ ಪಿಯುಸಿ / 10+2 ನೇ ತರಗತಿ ಅಥವಾ ಸಮಾನತೆಯನ್ನು ಪೂರೈಸಿದ ಅರ್ಜಿದಾರರು.  18 ರಿಂದ 27 ವರ್ಷಗಳು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇನ್ನು ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಮತ್ತು ಓಬಿಸಿ (2ಎ,2ಬಿ,3ಎ ಮತ್ತು 3ಬಿ) ಅಭ್ಯರ್ಥಿಗಳು 250/-ರೂ ಮತ್ತು ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ,ಪ್ರವರ್ಗ-1ರ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಜೂನ್ 19-10-2019 ರೊಳಗೆ ಪಾವತಿಸಬಹುದು.

ಆಯ್ಕೆ ಪ್ರಕ್ರಿಯೆ: ಬರಹ ಪರೀಕ್ಷೆ, ಭೌತಿಕ ಸಹಿಷ್ಣು ಪರೀಕ್ಷೆ ಮತ್ತು ದಕ್ಷತೆ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ಲಿಂಕ್‌ಗೆ ಭೇಟಿ ನೀಡಿ : https://www.ksp.gov.in/

ಘಟಕ ಪುರುಷ ಸ್ತ್ರೀ
ಬೆಂಗಳೂರು ನಗರ 640 160
ಬೆಳಗವಿ ನಗರ 60 15
ಹುಬ್ಬಳಿ-ಧಾರವಾಡ ನಗರ 60 15
ಮಂಗಳೂರು ನಗರ 60 15
ಬೆಂಗಳೂರು ಜಿಲ್ಲೆ 60 15
ರಾಮನಗರ ಜಿಲ್ಲೆ 60 15
ಚಾಮರಾಜನಗರ ಜಿಲ್ಲೆ 60 16
ಉತ್ತರ ಕನ್ನಡ ಜಿಲ್ಲೆ, ಕಾರವಾರ 61 17
ಮಂಡ್ಯ 80 20
ಉಡುಪಿ 80 21
ಹಾಸನ 60 15
ತುಮಕುರು 60 15
ದಕ್ಷಿಣ ಕನ್ನಡ  ಜಿಲ್ಲೆ 60 18
ಮೈಸೂರು ಜಿಲ್ಲೆ 60 16
ಕೊಡಗು 63 16
ಶಿವಮೊಗ್ಗ 80 20
ಒಟ್ಟು 1604 409

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ