ಶುಂಠಿ ತುಂಬಿಕೊಂಡು ತೆರಳುತಿದ್ದ ಲಾರಿ ತಿರುವಿನಲ್ಲಿ ಪಲ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

lorry-felldown
ಬೇಲೂರು, ಸೆ.5- ಶುಂಠಿ ತುಂಬಿಕೊಂಡು ತೆರಳುತಿದ್ದ ಲಾರಿಯೊಂದು ರಸ್ತೆ ತಿರುವಿನಲ್ಲಿ ಉರುಳಿ ಬಿದ್ದಿರುವ ಘಟನೆ ಬೇಲೂರು ಪೊ ಲೀಸ್ ಠಾಣೆ ವ್ಯಾಪ್ತಿಯ ತಾಲೂಕಿನ ಬೆಣ್ಣೂರು(ಯರೇಹಳ್ಳಿ)ಗಡಿಯಲ್ಲಿ ನಡೆದಿದೆ.  ಹಾಸನದಿಂದ ಬೇಲೂರು ಮೂಲಕ ಶುಂಠಿ ತುಂಬಿಕೊಂಡು ಚಿಕ್ಕಮಗಳೂರು ಕಡೆಗೆ ತೆರಳುತಿದ್ದ ರಾಜಸ್ಥಾನ ಮೂಲದ ಲಾರಿ ನಿನ್ನೆ ಬೆಳಗ್ಗೆ 4-30ರ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಬೆಣ್ಣೂರು(ಯರೇಹಳ್ಳಿ)ಗಡಿಯಲ್ಲಿನ ತಿರುವಿನಲ್ಲಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಲಾರಿಯಲ್ಲಿ ಶುಂಠಿ ತುಂಬಿದ್ದ ಚೀಲಗಳೆಲ್ಲ ರಸ್ತೆ ಪಕ್ಕಕ್ಕೆ ಬಿದ್ದಿದ್ದು ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್‍ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶುಂಠಿ ಚೀಲಗಳನ್ನು ಮತ್ತೊಂದು ಲಾರಿಗೆ ತುಂಬಿಕೊಂಡು ಹೋಗಿದ್ದಾರೆ.

Facebook Comments

Sri Raghav

Admin