ದಸರಾ ಅವ್ಯವಸ್ಥೆ ಬಗ್ಗೆ ಸಂಪೂರ್ಣ ತನಿಖೆಗೆ ತನ್ವೀರ್ ಸೇಠ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait

ಮೈಸೂರು,ಅ.20- ಈ ಬಾರಿಯ ದಸರಾದಲ್ಲಿ ನಡೆದಿರುವ ಅವ್ಯವಸ್ಥೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಅಧಿಕಾರಿಗಳೆಲ್ಲ ಜಿಲ್ಲಾ ಉಸ್ತವಾರಿ ಸಚಿವ ಜಿ.ಟಿ.ದೇವೇಗೌಡರ ಕೈಗೊಂಬೆಗಳಂತೆ ವರ್ತಿಸಿದರು ಎಂದು ಆರೋಪಿಸಿದರು.

ದಸರಾ ಕಾರ್ಯಕ್ರಮಗಳ ಪಾಸ್ ವಿತರಣೆಯಲ್ಲಿ ತಾರತಮ್ಯ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು 10 ಸಾವಿರ ಪಾಸುಗಳನ್ನು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಐದು ಸಾವಿರ ಪಾಸುಗಳನ್ನು ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಲಿತ ನಡೆಸುತ್ತಿದ್ದರೂ ಕಾಂಗ್ರೆಸ್ ನಗರಾಧ್ಯಕ್ಷರಿಗೆ ಕೇವಲ ಎಂಟು ಪಾಸುಗಳನ್ನು ನೀಡಿದ್ದಾರೆ. ಪಾಸ್ ವಿತರಣೆಯಲ್ಲಿ ಕಾಂಗ್ರೆಸ್‍ನವರಿಗೆ ತಾರತಮ್ಯ ಮಾಡಿದ್ದರಿಂದ ಸ್ಥಳೀಯ ಕಾಂಗ್ರೆಸ್ಸಿಗರ್ಯಾರೂ ಪಾಸ್ ಪಡೆದುಕೊಂಡಿಲ್ಲ ಎಂದು ತನ್ವೀರ್ ಸೇಠ್ ಹೇಳಿದರು.

ದಸರಾ ಪಾಸ್‍ಗಳ ಮುದ್ರಣ, ಯಾರ್ಯಾರಿಗೆ ಎಷ್ಟೆಷ್ಟು ಪಾಸ್ ವಿತರಿಸಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.
ಈ ಬಾರಿಯ ದಸರಾದ ಎಲ್ಲಾ ಕಾರ್ಯಕ್ರಮಗಳೂ ಅದ್ವಾನದಿಂದ ಕೂಡಿತ್ತು. ಗೋಲ್ಡ್ ಪಾಸ್ ಪಡೆದವರೂ ಕೂಡ ಪರದಾಡುವುದು ತಪ್ಪಲಿಲ್ಲ. ದಸರಾ ಅದ್ವಾನಗಳ ಬಗ್ಗೆ ನಾನು ಸದನದಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು.  ನಗರದಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಮಾಡಿ ಮೈಸೂರಿನ ಸಂಸ್ಕøತಿಯ ಗರಿಮೆ-ಹಿರಿಮೆಯನ್ನು ಹಾಳು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

Facebook Comments

Sri Raghav

Admin