ರಾಮನಗರದಲ್ಲಿ ಶೆಟರ್ ಮೀಟಿ 6 ಅಂಗಡಿಗಳ ಸರಣಿಗಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

Ramanagara-Shop-Rob
ರಾಮನಗರ, ಸೆ.5- ತಡರಾತ್ರಿ ಕಳ್ಳರು ನಾಲ್ಕು ಬಡಾವಣೆಗಳಲ್ಲಿ ಆರು ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ ಕಳ್ಳತನ ನಡೆಸಿರುವ ಘಟನೆ ಐಜೂರು ಹಾಗೂ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರದ ವಿವೇಕಾನಂದನಗರ, ರಾಯರದೊಡ್ಡಿ, ಸಿಎಂಪಿ ಕಾಂಪ್ಲೆಕ್ಸ್‍ಗಳಲ್ಲಿನ ಸಿಮೆಂಟ್, ರಸಗೊಬ್ಬರ, ಪ್ರಾವಿಷನ್ ಸ್ಟೋರ್‍ಗಳ ರೋಲಿಂಗ್ ಶೆಟರ್ ಮೀಟಿ ಕೈಗೆ ಸಿಕ್ಕಿದ ವಸ್ತುಗಳು, ಕ್ಯಾಷ್‍ಬಾಕ್ಸ್‍ನಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ.

ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ರೋಲಿಂಗ್ ಶೆಟರ್ ಮೀಟಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.  ಸ್ಥಳಕ್ಕೆ ಎಫ್‍ಎಸ್‍ಎಲ್ ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಂಗಡಿಗಳ ಮಾಲೀಕರು ತಮ್ಮ ತಮ್ಮ ಅಂಗಡಿಗಳಲ್ಲಿ ಯಾವ ಯಾವ ವಸ್ತುಗಳು, ಎಷ್ಟು ಹಣ ಕಳ್ಳತನವಾಗಿದೆ ಎಂಬುದನ್ನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

WhatsApp Image 2018-09-05 at 11.08.00 AM

Facebook Comments

Sri Raghav

Admin