ಎನ್ಎಸ್ಐಸಿಯಲ್ಲಿ ಮ್ಯಾನೇಜರ್ ಶ್ರೇಣಿಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

NSIC

ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಎನ್ಎಸ್ಐಸಿ) ವಿಶೇಷ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಪ.ಜಾ, ಪ.ಪಂ, ಹಿಂದುಳಿದ ಮತ್ತು ಪಿಡಬ್ಲ್ಯೂಬಿಡಿ ವರ್ಗದ ಅಭ್ಯರ್ಥಿಗಳಿಂದ ಆನ್ ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 31
ಹುದ್ದೆಗಳ ವಿವರ
1.ಜನರಲ್ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್) – 02
2.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್) – 04
3.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟೆಂಟ್ಸ್) – 03
4.ಚೀಫ್ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್ / ಸಿವಿಲ್ ಮತ್ತು ಮೆಕಾನಿಕಲ್) _ 03
5.ಚೀಫ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟೆಂಟ್ಸ್) – 01
6.ಡೆಪ್ಯೂಟಿ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್ / ಮೆಕಾನಿಕಲ್ / ಎಲೆಕ್ಟ್ರಿಕಲ್/ಸಿವಿಲ್ ಮತ್ತು ಕಾನೂನು) – 12
7.ಡೆಪ್ಯೂಟಿ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟೆಂಟ್ಸ್) – 06
ವಿದ್ಯಾರ್ಹತೆ : ವ್ಯಾಣಿಜ್ಯ ವಿಷಯದಲ್ಲಿ ಪದವಿ, ಸಿಎ, ಐಸಿಡಬ್ಲ್ಯೂಎ (ಸಿಎಂಎ) ಎಂಬಿಎ, ಪಿಜಿಡಿಬಿಎಂ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ.
ವಯೋಮಿತಿ : ಕ್ರ.ಸಂ 1ರ ಹುದ್ದೆಗೆ ಗರಿಷ್ಠ 50 ವರ್ಷ, ಕ್ರ.ಸಂ 2,3ರ ಹುದ್ದಗೆ 45 ವರ್ಷ, ಕ್ರ.ಸಂ 4,5ರ ಹುದ್ದೆಗೆ 42 ವರ್ಷ, ಕ್ರ.ಸಂ 6.7ರ ಹುದ್ದೆಗೆ ಗರಿಷ್ಠ 35 ವರ್ಷ ನಿಗದಿಮಾಡಲಾಗಿದೆ. ವಯೋಮಿತಿಯಲ್ಲಿ ಮೀಸಲಾತಿ ಪಡೆಯುವವರಿಗೆ ಸರ್ಕಾರಿ ನಿಯಮಗಳ ಆಧಾರದಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಜಿಎಂ, ಡಿಜಿಎಂ, ಡಿಜಿಎಂ (ಎಫ್ ಅಂಡ್ ಎ) ಹುದ್ದೆಗಳಿಗೆ 1000 ರೂ, ಸಿಎಂ, ಸಿಎಂ (ಎಫ್ ಅಂಡ್ ಎ) ಡಿಎಂ, ಡಿಎಂ (ಎಫ್ ಅಂಡ್ ಎ) ಹುದ್ದೆಗಳಿಗೆ 500 ರೂ ಶುಲ್ಕ ನಿಗದಿಗೊಳಿಸಲಾಗಿದೆ.
ಅಂಚೆ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವ ವಿಳಾಸ : ಜನರಲ್ ಮ್ಯಾನೇಜರ್, ಮಾನವ ಸಂಪನ್ಮೂಲ ವಿಭಾಗ, ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್, ಎನ್ಎಸ್ಐಸಿ ಭವನ, ಓಖ್ಲಾ ಇಂಡಸ್ಟ್ರಿಸ್ ಎಸ್ಟೇಟ್, ನವದೆಹಲಿ – 110020 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-10-2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.nsic.co.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ1

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ2

Facebook Comments

Sri Raghav

Admin