ಅ.11-12ರಂದು ಚೀನಾ ಅಧ್ಯಕ್ಷ ಜಿನ್‍ಪಿಂಗ್ ಭಾರತ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.9 (ಪಿಟಿಐ)- ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅ.11 ಮತ್ತು 12ರಂದು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎರಡನೇ ಔಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಪ್ರಕಟಿಸಿದೆ.

ಚೆನ್ನೈನಲ್ಲಿ ನಡೆಯಲಿರುವ ಶೃಂಗಸಭೆಯು ಉಭಯ ನಾಯಕರಿಗೆ ದ್ವಿಫಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಷಯಗಳ ಕುರಿತು ಗಹನವಾದ ಚರ್ಚೆ ಮುಂದುವರಿಸಲು ಉತ್ತಮ ಅವಕಾಶದ ವೇದಿಕೆ ಕಲ್ಪಿಸಿದೆ ಎಂದು ಸಚಿವಾಲಯ ಹೇಳಿದೆ.  ಪ್ರಧಾನಮಂತ್ರಿ ಅವರ ಆಹ್ವಾನದ ಮೇರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಷ್ಟ್ರಾಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಅಕ್ಟೋಬರ್ 11 ಮತ್ತು 12 ರಂದು ಭಾರತಕ್ಕೆ ಭೇಟಿ ನೀಡಲಿದ್ಧಾರೆ.

ಚೆನ್ನೈನಲ್ಲಿ ಮಮಲ್ಲಪುರಂನಲ್ಲಿ ನಡೆಯಲಿರುವ 2ನೇ ಔಪಚಾರಿಕ ಶೃಂಗಸಭೆಯಲ್ಲಿ ಅವರು ಭಾಗವಹಿಸುವರು. ಶೃಂಗಸಭೆ ವೇಳೆ ಭಾರತ ಮತ್ತು ಚೀನಾ ಉಭಯ ದೇಶಗಳ ನಿಕಟ ಅಭಿವೃದ್ದಿ ಸಹಭಾಗಿತ್ವವನ್ನು ಮತ್ತಷ್ಟು ಸದೃಢಗೊಳಿಸಲು ಅಭಿಪ್ರಾಯಗಳ ವಿನಿಮಯ ಮಾಡಿಕೊಳ್ಳಲಿವೆ ಎಂದು ಸಚಿವಾಲಯ ತಿಳಿಸಿದೆ.

Facebook Comments