ಯಾದಗಿರಿ ಜಿ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯಡಿಯಾಪೂರ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಯಾದಗಿರಿ: ಶುಕ್ರವಾರ ಜಿ.ಪಂ.ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುರಪುರ ತಾಲೂಕಿನ ಅರಕೇರಾ (ಜೆ) ಸದಸ್ಯ ಬಸಣ್ಣಗೌಡ ಯಡಿಯಾಪುರ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶಹಾಪುರ ತಾಲೂಕಿನ ಸಗರ ಜಿ.ಪಂ ಸದಸ್ಯೆ ಶರಣಮ್ಮ ನಾಗಪ್ಪ ನಾಮಪತ್ರ ಸಲ್ಲಿಸಿದರು. ಬಸಣ್ಣಗೌಡ ಯಡಿಯಾಪುರ ಅವರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಬಂಡಾಯ ಅಭ್ಯಾರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಚುನಾವಣೆಯಲ್ಲಿ 22 ಸದಸ್ಯರು ಹಾಜರಿದ್ದು, ಮತಚಲಾಯಿಸಿದರು. ಯಡಿಯಾಪುರ 12 ಮತಗಳನ್ನು ಪಡೆದರೆ. ಶರಣಮ್ಮ ಓರ್ವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ 10 ಮತಗಳನ್ನು ಪಡೆದರು. 2 ಮತಗಳಿಂದ ಅಧ್ಯಕ್ಷರಾಗಿ ಯಡಿಯಾಪುರ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತ ಮಂಜುನಾಥ ಪ್ರಸಾದ ಕಾರ್ಯನಿರ್ವಹಿಸಿ ಅಧ್ಯಕ್ಷ ಘೋಷಣೆ ಮಾಡಿದರು. ಯಡಿಯಾಪುರ ಅಧ್ಯಕ್ಷರಾಗಿ ಘೋಷಣೆಯಾಗುತ್ತಿದಂತೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಸಿದರು.

ನಂತರ ಸ್ಥಳಿಯ ಶಾಸಕ ವೆಂಕಟರಡ್ಡಿ ಮುದ್ನಾಳ ಜನಸಂಪರ್ಕ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜುಗೌಡ, ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕರಾದ ಡಾ. ವೀರಬಸವಂತರಡ್ಡಿ ಮುದ್ನಾಳ, ಗುರುಪಾಟೀಲ್ ಶಿರವಾಳ, ಎಚ್.ಸಿ ಪಾಟೀಲ್, ರಾಜಾ ಹನುಮಪ್ಪ ನಾಯಕ, ಸಿದ್ದಣಗೌಡ ಕಾಡಂನೋರ್, ಕಿಶನ ರಾಠೋಡ್, ಬಸವರಾಜ ಚಂಡ್ರಕಿ, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್, ರಮೇಶ ದೊಡ್ಮನಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Facebook Comments

Sri Raghav

Admin