ಜ್ಯೋತಿಷಿಗಳು ಸೂಚಿಸಿದ ಮಹೂರ್ತದಲ್ಲಿ ಯಡಿಯೂರಪ್ಪ ಪದಗ್ರಹಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.24- ತಿಂಗಳ ಬಳಿಕ ಕೊನೆಗೂ ದೋಸ್ತಿ ಸರ್ಕಾರ ಪತನವಾಗಿದೆ. ಸರ್ಕಾರ ರಚನೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸಿದ್ದು, ಬಿ.ಎಸ್. ಯಡಿಯೂರಪ್ಪ ಅವರ ಪದಗ್ರಹಣವು ಜ್ಯೋತಿಷಿಗಳ ಸಲಹೆಯಂತೆ ನಡೆಯಲಿದೆಯಂತೆ.

ಜ್ಯೋತಿಷಿಗಳು ಎರಡು ಮುಹೂರ್ತ ನೀಡಿದ್ದು, ಗುರುವಾರ ಮಧ್ಯಾಹ್ನ 3.28 ನಿಮಿಷದಿಂದ 3.48 ನಿಮಿಷದವರೆಗೆ ಅಥವಾ ಶುಕ್ರವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸುವಂತೆ ತಿಳಿಸಿದ್ದಾರೆ. ಯಡಿಯೂರಪ್ಪ ಗುರುವಾರದ ಮುಹೂರ್ತದಲ್ಲಿ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಕಚೇರಿಯ ಪಕ್ಷದ ಶಾಸಕಾಂಗ ಸಭೈ ನಡೆಯಲಿದೆ. ಯಡಿಯೂರಪ್ಪ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗಲಿದ್ದಾರೆ. ಸಭೆಯಲ್ಲಿ ಪಕ್ಷೇತರ ಶಾಸಕರಾದ ಆರ್.ಶಂಕರ್ ï ಮತ್ತು ಹೆಚ್ . ನಾಗೇಶ್ ಸಹ ಭಾಗಿಯಾಗುವ ಸಾಧ್ಯತೆಯಿದೆ. ಜೊತೆಗೆ ಸಭೈಯಲ್ಲಿ ರಾಜ್ಯಪಾಲರ ಭೇಟಿ ಬಗ್ಗೆ ನಿರ್ಧರಿಸಲಿದ್ದಾರೆ.

ಆಗಸ್ಟ್ 1ರವೆರೆಗೂ ಆಷಾಢ ಇರುವ ಹಿನ್ನೆಲೆ, ಸಚಿವ ಸಂಪುಟ್ ರಚನೆ ಕುರಿತು ಜ್ಯೋತಿಷಿಗಳ ಸಲಹೆ ಪಡೆದು ಬಿಎಸ್‍ವೈ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin