“ಭ್ರಷ್ಟ ಸರ್ಕಾರಕ್ಕೆ ಇಂದೇ ಕೊನೆ ದಿನ, ಶುಕ್ರವಾರ ಬಿಜೆಪಿಗೆ ಶುಭವಾಗಲಿದೆ” : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19- ಇವತ್ತೆ ಭ್ರಷ್ಟ ಸರ್ಕಾರಕ್ಕೆ ಕೊನೆ ದಿನವಾಗಲಿದೆ. ಶುಕ್ರವಾರ ಬಿಜೆಪಿಗೆ ಶುಭಕರ ದಿನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾದ ಸುಳ್ಳು ಭರವಸೆಗೆ ಕೊನೆ ದಿನವಾಗುತ್ತೆ.

ನಿನ್ನೆ ಮೈತ್ರಿ ಸರ್ಕಾರದ ನಾಯಕರು ವ್ಯವಸ್ಥಿತವಾಗಿಯೇ ಸಿದ್ಧರಾಗಿ ಬಂದು ಕಾಲಹರಣ ಮಾಡಿದ್ದರು. ಈ ವೇಳೆ ಬಿಜೆಪಿಯವರನ್ನು ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ದೂರಿದರು.  ರಾಜ್ಯಪಾಲರು ಮುಖ್ಯಮಂತ್ರಿಗೆ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಿರುವ ಕಾರಣ ಜೆಡಿಎಸ್‍ನಿಂದ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಆದರೆ ಒಂದು ವೇಳೆ ಮೈತ್ರಿ ಸುಪ್ರೀಂಕೋರ್ಟ್ ಮೊರೆ ಹೋದರೆ , ಸುಪ್ರೀಂಕೋರ್ಟ್‍ನಿಂದ ಛೀಮಾರಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ರಾಜ್ಯದ ವಿದ್ಯಮಾನಗಳ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾಅವರಿಗೆ ಮಾಹಿತಿ ನೀಡುತ್ತೇವೆ. ಬಿಜೆಪಿಯಲ್ಲಿ 105 ಶಾಸಕರಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಸಂಖ್ಯೆ 98ಕ್ಕೆ ಇಳಿದಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ಕೊನೆ ದಿನ ಇವತ್ತು. ಹೀಗಾಗಿ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ನಮಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಅವರು ಹೇಳಿದರು.  ಇನ್ನು ನಿನ್ನೆ ವಿಧಾನಸೌಧದಲ್ಲಿ ರಾಜಕೀಯ ದೊಂಬರಾಟನಡೆದಿತ್ತು. ಅದಕ್ಕೆ ತಾಳ ಹಾಕುವಂತಹ ಕೆಲಸ ಸ್ಪೀಕರ್ ಮಾಡಿದ್ದಾರೆ. ಯಾರೇ ಆದರೂ ಶಾಸಕರ ಮೇಲೆ ಕ್ರಮ ಕೈಗೊಳ್ಳುತ್ತಾರೆ, ಸ್ಪೀಕರ್ ನಡೆಯನ್ನು ಟೀಕೆ ಮಾಡೋದಕ್ಕೆ ಹೋಗಲ್ಲ.

ನಾವು ಇವತ್ತು ಶಾಂತವಾಗಿ ಮುಖ್ಯಮಂತ್ರಿಯವರ ವಿದಾಯ ಭಾಷಣ ಕೇಳುತ್ತೇವೆ. ಇನ್ನು ಶ್ರೀಮಂತ ಪಾಟೀಲರನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಸುಳ್ಳು ಎಂದು ಬಿಎಸ್‍ವೈ ಹೇಳಿದರು. ರೈತರ ಸಾಲಮನ್ನಾದ ಸುಳ್ಳು ಭರವಸೆಗೆ ಕೊನೆ ದಿನವಾಗುತ್ತೆ. ನಿನ್ನೆ ಮೈತ್ರಿ ಸರ್ಕಾರದ ನಾಯಕರು ವ್ಯವಸ್ಥಿತವಾಗಿಯೇ ಸಿದ್ಧರಾಗಿ ಬಂದು ಕಾಲಹರಣ ಮಾಡಿದ್ದರು.

ಈ ವೇಳೆ ಬಿಜೆಪಿಯವರನ್ನು ಕೆರಳಿಸುವ ಯತ್ನ ಮಾಡಿದ್ದಾರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಗುಡುಗಿದರು. ವಿಶ್ವಾಸಮತಯಾಚನೆಗೆ ಅವಕಾಶ ನೀಡದೆ ಸದನದಲ್ಲಿ ಕಾಲಹರಣಕ್ಕೆ ಅವಕಾಶ ನೀಡಲಾಯಿತು. ಶೀಘ್ರ ವಿಶ್ವಾಸಮತಯಾಚನೆ ಮಾಡಲೇಬೇಕೆಂದು ಪಟ್ಟು ಹಿಡಿದ ಬಿಜೆಪಿ ರಾಜ್ಯಪಾಲರ ಮೊರೆ ಹೋಗಿತ್ತು.

ಮೈತ್ರಿ ಸರ್ಕಾರಕ್ಕೆ ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದು ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಹಿನ್ನಡೆಯಲಾಗಿದೆ.

Facebook Comments

Sri Raghav

Admin