ಯಗಚಿ ನದಿ ತೀರದಲ್ಲಿ ವಾಮಾಚಾರ : ಹಂದಿ, ಅರಿಷಿಣ ಕುಂಕುಮ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.22- ಮಾಟ ಮಂತ್ರದಿಂದ ಯಗಚಿ ನದಿ ನೀರು ಕಲುಷಿತವಾಗುತ್ತಿದೆ, ಹಾಸನ ತಾಲೂಕಿನ ಯಗಚಿ ನದಿ ತಟದಲ್ಲಿ ವಾಮಾಚಾರದ ರೀತಿಯಲ್ಲಿ ದೊಡ್ಡ ದೊಡ್ಡ ಹಂದಿ, ಅಪಾರ ಪ್ರಮಾಣದ ಅರಿಷಿಣ ಕುಂಕುಮ ಮಡಿಕೆ ಕುಡಿಕೆಗಳು ಪತ್ತೆ ಯಾಗಿದ್ದು ರಾತ್ರೋ ರಾತ್ರಿ ವಾಮಾಚಾರ ನೆಡೆಯುತ್ತಿದೆ.

ಈ ಜಾಗದಲ್ಲಿ ಸಾರ್ವಜನಿಕರು ಓಡಾಡುವದಕ್ಕೂ ಹೆದರುತ್ತಾರೆ,  ಅಮಾವಾಸ್ಯೆ ಹುಣ್ಣಿಮೆ ದಿನ ಯಾರಿಗೂ ಗೊತ್ತಿಲ್ಲದ ಹಾಗೆ ಮಾಡುತ್ತಾರೆ ವಮಾಚಾರ, ಆದುನಿಕತೆ ಎಷ್ಟೇ ಬೆಳೆದರು ವಾಮಾಚಾರದಂತ ಮೌಡ್ಯತಗೆ ಇಂದಿಗೂ ಸಾಕ್ಷೀ, ವಾಮಾಚಾರದಿಂದ ನದಿ ನೀರು ಸಂಪೂರ್ಣ ಕಲುಷಿತವಾಗುತ್ತಿದೆ.  ರಾಷ್ಟ್ರೀಯಾ ಹೆದ್ದಾರಿ ಪಕ್ಕದಲ್ಲೆ ಈ ರೀತಿ ವಾಮಾಚಾರ ನೆಡೆಯುತ್ತಿದ್ದು, ಅಕ್ಕ ಪಕ್ಕದ ಗ್ರಾಮಸ್ಥರು ಭಯ ಬೀತರಾಗಿದ್ದಾರೆ.

Facebook Comments