ಗೋಶಾಲೆಗೆ ಮೇವು ಅನುದಾನ ನೀಡಿದ ಯಶ್, ದರ್ಶನ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಜ.20- ನಟನೆಯೊಂದಿಗೆ ಸಮಾಜ ಸೇವೆಯಲ್ಲೂ ಗುರುತಿಸಿ ಕೊಂಡಿರುವ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್À ಯಶ್ ಅವರು ಈಗ ಗೋಮಾತೆಯ ಸೇವೆಗೆ ಮುಂದಾಗಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜೋಡೆತ್ತುಗಳೆಂದು ಗುರುತಿಸಿಕೊಂಡಿದ್ದ ಯಶ್ ಹಾಗೂ ದಚ್ಚು ಈಗ ಮಂಡ್ಯದ ಚೈತ್ರಾ ಗೋಶಾಲೆಗೆ 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡುವ ಮೂಲಕ ಗೋವುಗಳ ಮೇವಿನ ಕೊರತೆಯನ್ನು ನೀಗಿಸಲು ಮುಂದಾಗಿದ್ದಾರೆ.

ಪಾಂಡವಪುರದ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿ ನಿರ್ಮಾಣ ವಾಗುತ್ತಿದ್ದ ಚೈತ್ರಾ ಗೋಶಾಲೆಯ ಕಟ್ಟಡ ನಿರ್ಮಾಣಕ್ಕೂ ಸಹಾಯ ಮಾಡಿದ್ದ ಮಾಡಿದ್ದ ಯಶ್ ಈಗ ದರ್ಶನ್‍ರೊಂದಿಗೆ ಕೈಜೋಡಿಸಿ ಈ ಗೋವು ಶಾಲೆಗೆ ಮೇವಿನ ಅನುದಾನವನ್ನು ನೀಡಿದ್ದಾರೆ. ದರ್ಶನ್ ಹಾಗೂ ಯಶ್ ಅವರು ಚೈತ್ರಾ ಗೋಶಾಲೆಗೆ ಮೇವನ್ನು ಸರಬರಾಜು ಮಾಡಿರುವ ದೃಶ್ಯಗಳನ್ನು ಅಭಿಮಾನಿಗಳು ಅಂತರ್ಜಾಲದಲ್ಲಿ ಅಪ್‍ಲೋಡ್ ಮಾಡಿದ್ದು ಅದು ಈಗ ವೈರಲ್ ಆಗಿದೆ.

ಬೇಸಿಗೆ ಕಾಲದಲ್ಲಿ ಮೂಕ ಪ್ರಾಣಿಗಳಿಗೆ ಮೇವಿನ ಕೊರತೆ ಹೆಚ್ಚಾಗಿ ಕಾಡುತ್ತದೆ ಅದನ್ನು ತಪ್ಪಿಸುವುದಕ್ಕಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಯಶ್À ಹಾಗೂ ದರ್ಶನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಾಣಿ ಪ್ರಿಯರಾಗಿರುವ ದರ್ಶನ್ ಅವರು ಈ ಹಿಂದೆಯೂ ಸಾಕಷ್ಟು ಗೋ ಶಾಲೆಗಳಿಗೆ ಮೇವು ಹಾಗೂ ಧನ ಸಹಾಯವನ್ನು ಮಾಡಿದ್ದಾರೆ.

Facebook Comments