ಇದು ಯಶಸ್ಸಿನ ಮುಂದೂಡಿಕೆಯಷ್ಟೇ, ನಿಮ್ಮೊಂದಿಗೆ ನಾವಿದ್ದೇವೆ: ಇಸ್ರೋ ವಿಜ್ಞಾನಿಗಳಿಗೆ ಸಿಎಂ ಟ್ವೀಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.7- -ಸಾಫ್ಟ್ ಲ್ಯಾಂಡಿಂಗ್ ವೇಳೆ ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಇಸ್ರೋದ ನಿಯಂತ್ರಣ ಕಳೆದುಕೊಂಡಿದೆ. ಇದು ಯಶಸ್ಸಿನ ಮುಂದೂಡಿಕೆ ಮಾತ್ರ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಚಂದ್ರಯಾನ-2 ರೋವರ್ ಚಂದ್ರನ ಅಂಗಳಕ್ಕೆ ಇಳಿಯುವ ಕೆಲವೇ ಅಂತರದಲ್ಲಿ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇದು ಯಶಸ್ಸಿನ ಮುಂದೂಡಿಕೆಯಷ್ಟೇ. ನಿಮ್ಮೊಂದಿಗೆ ನಾವಿದ್ದೇವೆ ಎಂದು ವಿಜ್ಞಾನಿಗಳಿಗೆ ಧೈರ್ಯ ತುಂಬಿ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಜಗತ್ತಿನ ಯಾವ ರಾಷ್ಟ್ರವೂ ಪ್ರಯತ್ನ ನಡೆಸದ ಚಂದ್ರನ ದಕ್ಷಿಣ ದೃವದಲ್ಲಿ ಲ್ಯಾಂಡ್ ಮಾಡುವ ಧೈರ್ಯ ತೋರಿದ್ದಕ್ಕೆ ಇಸ್ರೋ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ.  ನಿಮ್ಮ ಸಾಮಥ್ರ್ಯ ಮತ್ತು ಸಾಧನೆಗಳು ಯಾವಾಗಲೂ ನಮ್ಮ ದೇಶವನ್ನು ಎತ್ತರದ ಸ್ಥಾದಲ್ಲಿ ನಿಲ್ಲಿಸಲಿವೆ. ಈಗ ಆಗಿರುವುದು ಚಂದ್ರಯಾನ ಯಶಸ್ಸಿನ ಮುಂದೂಡಿಕೆ ಮಾತ್ರ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ