ಬಿಎಸ್‍ವೈ, ವಿಜಯೇಂದ್ರರನ್ನೇ ನೆಚ್ಚಿಕೊಂಡ ಬಿಜೆಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.26- ಪ್ರತಿಷ್ಠೆಯ ಕಣವಾಗಿರುವ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಸರೆಯನ್ನೇ ಬಿಜೆಪಿ ನೆಚ್ಚಿಕೊಂಡಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇರಾನೇರ ಪೈಪೋಟಿ ನೀಡುತ್ತಿರುವುದರಿಂದ ಕೊಂಚ ಅದಿರಿರುವ ಬಿಜೆಪಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಇನ್ನುಳಿದ ಮೂರು ದಿನಗಳ ಅವಯಲ್ಲಿ ಪ್ರಚಾರ ನಡೆಸಬೇಕೆಂದು ಮನವಿ ಮಾಡಿದೆ.

ನಾಳೆ ಹಾಗೂ ಗುರುವಾರ ಎರಡೂ ಕ್ಷೇತ್ರಗಳಲ್ಲಿ ತಂದೆ-ಮಗ ಇಬ್ಬರು ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಮುಖವಾಗಿ ಹಾನಗಲ್‍ನಲ್ಲಿ ಒಳ ಹೊಡೆತದ ಭಯ ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕಾಡುತ್ತಿದೆ.

ತವರು ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಕ್ಷೇತ್ರ ಬರುವುದರಿಂದ, ಈ ಚುನಾವಣೆ ಗೆಲ್ಲುವುದು ಬೊಮ್ಮಾಯಿಯವರಿಗೆ ಮುಖ್ಯವಾಗಿದೆ. ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಬಯಸಿದ್ದವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವುದರಿಂದ, ವಿರೋ ಬಣದ ಜೊತೆಗೆ ಸ್ಥಳೀಯ ನಾಯಕರು ಒಳಒಪ್ಪಂದ ಮಾಡಿಕೊಳ್ಳುವ ಭೀತಿ ಬಿಜೆಪಿಗೆ ಕಾಡುತ್ತಿದೆ.

ಸಿ.ಎಂ.ಉದಾಸಿ ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗಬಹುದು ಎನ್ನುವುದು ಕಾರ್ಯಕರ್ತರ ಮತ್ತು ಖುದ್ದು ಉದಾಸಿ ಕುಟುಂಬದ ನಿರೀಕ್ಷೆಯಾಗಿತ್ತು. ಆದರೆ ಬಿಜೆಪಿ ಬೇರೆಯವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅಂಶವನ್ನು ಆಂತರಿಕ ಸಮೀಕ್ಷೆಯಲ್ಲೂ ಉಲ್ಲೇಖಿಸಲಾಗಿದೆ. ಜೊತೆಗೆ, ಯಡಿಯೂರಪ್ಪನವರು ಪ್ರಚಾರ ನಡೆಸುವುದು ಅತಿಮುಖ್ಯ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಇದರಿಂದಾಗಿ ಬಿಜೆಪಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಉಳಿದಿರುವ ದಿನಗಳಲ್ಲಿ ಅತಿಹೆಚ್ಚು ಬಳಸಿಕೊಳ್ಳದೆ ಬೇರೆ ಮಾರ್ಗ ಇಲ್ಲ ಎಂದು ಹೇಳಲಾಗುತ್ತಿದೆ.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಕಳೆದ ಚುನಾವಣೆಯಲ್ಲಿ 6,500 ಮತಗಳ ಅಂತರದಿಂದ ಸೋತಿದ್ದರು, ಈ ಬಾರಿ ಅದು ಅನುಕಂಪಕ್ಕೆ ತಿರುಗಿ, ಕಾಂಗ್ರೆಸ್ಸಿಗೆ ಅನುಕೂಲವಾಗಬಹುದು. ಎರಡು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇನ್ನುಳಿದ ಎರಡು ದಿನಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮತದಾರರನ್ನು ಓಲೈಸುವ ಕೆಲಸಕ್ಕೆ ಮೂರು ಪಕ್ಷಗಳ ಪ್ರಯತ್ನ ಮುಂದುವರಿದಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಜÁತಿವಾರು ಸಭೆಗಳನ್ನು ನಡೆಸುತ್ತಿದೆ. ಈ ಸಭೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯನ್ನು ದಡ ಸೇರಿಸುವ ಸಾಮಥ್ರ್ಯ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ಶಿವಮೊಗ್ಗ ಜಿಲ್ಲೆಗೆ ಹಾನಗಲ್ ಹೊಂದಿಕೊಂಡಿರುವುದರಿಂದ ಇಲ್ಲಿ ಬಿಎಸ್‍ವೈ ಮತ್ತು ವಿಜಯೇಂದ್ರ ಅವರ ಪ್ರಭಾವ ಹೆಚ್ಚಿದೆ ಎಂದೇ ಹೇಳಬಹುದು.

ವಿಜಯೇಂದ್ರ ಕೂಡಾ ಪ್ರಚಾರ ನಡೆಸುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಯಡಿಯೂರಪ್ಪ ಸಾರ್ವಜನಿಕ ಸಭೆ ಮತ್ತು ರೋಡ್ ಶೋ ನಡೆಸಿದ್ದಾರೆ. ಅವರು ಹೋದಲೆಲ್ಲಾ ಜನಪ್ರವಾಹವೇ ಹರಿದು ಬರುತ್ತಿದೆ. ಇದು ಅವರ ಜನಪ್ರಿಯತೆಯನ್ನು ತೋರಿಸುತ್ತಿದೆ.

ಹೀಗಾಗಿ ಬಹಿರಂಗ ಪ್ರಚಾರ ಮುಗಿಯುವ ದಿನ ಬೃಹತ್ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಇನ್ನು, ವಿಜಯೇಂದ್ರ ಕೂಡಾ ಪ್ರಚಾರ ನಡೆಸುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೇ ಬಿಜೆಪಿಗೆ ಆಸರೆ ಎನ್ನುವ ಪರಿಸ್ಥಿತಿಯಿದೆ.

Facebook Comments