ಯೋಗರಾಜ್ ಭಟ್ಟರ ಕೊರೊನಾ ಜಾಗೃತಿ ಹಾಡು ಮೆಚ್ಚಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 3- ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಜತೆಗೂಡಿ ರಚಿಸಿರುವ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಹಾಡೊಂದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬಿಡುಗಡೆಗೊಳಿಸಿ ಹಾಡು ಕೇಳಿ ಮನಃಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾರೊ ನೀನು ಮಾನವಾ… ಕೇಳುತ್ತಿಹುದು ಕೊರೊನಾ… ಎಂಬ ಕೊರೊನಾ ಜÁಗೃತಿ ಹಾಡು ವಿಭಿನ್ನವಾಗಿದ್ದು, ಯೋಗರಾಜ್ ಭಟ್ ಅವರು ಕೊರೊನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದು ಹಾಡನ್ನು ನಿರ್ದೇಶಿಸಿದ್ದಾರೆ.

ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದರೆ, ಗಾಯಕ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ಈ ಒಂದು ಹಾಡಿನ ಚಿತ್ರೀಕರಣಕ್ಕೆ ಕೊರೊನಾ ವಾರಿಯರ್ಸ್ ಗಳನ್ನು ಬಳಸಿಕೊಂಡಿರುವುದು ವಿಶೇಷ.

ಏಕೆಂದರೆ ಹಗಲಿರುಳೆನ್ನದೆ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡುತ್ತಿರುವ ನಗರದ ಪೊಲಿಸ್ ಕಮಿಷನರ್, ಡಿಸಿಪಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡು, ಪ್ರಾಣದ ಹಂಗು ತೊರೆದು ಸೇವೆ ಮಾಡುತ್ತಿರುವ ಡಾಕ್ಟರ್ಸ್ , ನರ್ಸ್‍ಗಳು , ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಕೆಲಸವನ್ನು ಯೋಗರಾಜ್ ಭಟ್ ಗುರುತಿಸಿದ್ದು, ಎಲ್ಲರ ಶ್ರಮವನ್ನು ಒಂದು ಉತ್ತಮ ಹಾಡಿನ ಮೂಲಕ ಚಿತ್ರೀಕರಿಸಿ ಅಧಿಕೃತವಾಗಿ ಮುಖ್ಯಮಂತ್ರಿಗಳ ಮೂಲಕ ಲೋಕಾರ್ಪಣೆ ಮಾಡಿಸಿದ್ದಾರೆ. ಈಗ ಯು ಟ್ಯೂಬ್‍ನಲ್ಲಿ ಕೊರೊನಾ ವಾರಿಯರ್ಸ್‍ನ ಈ ಹಾಡನ್ನು ನೋಡಬಹುದಾಗಿದೆ.

Facebook Comments

Sri Raghav

Admin