ನವಭಾರತ ಸೃಷ್ಟಿಗಾಗಿ ಪ್ರಚಂಡ ಜನಾದೇಶ : ಯೋಗಿ ವಿಶ್ಲೇಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಮೇ 26- ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಲಭಿಸಿದ ಪ್ರಚಂಡ ಗೆಲುವು ನವಭಾರತ ಸೃಷ್ಟಿಗಾಗಿ ಲಭಿಸಿದ ದೊಡ್ಡ ಜನಾದೇಶವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಶ್ಲೇಷಿಸಿದ್ದಾರೆ.

ಸಮಾಜ ಕಲ್ಯಾಣ ಕಾರ್ಯಕ್ರಮಗಳ ಹೆಸರಿನಲ್ಲಿ ಬಡವರ ಹಣವನ್ನು ಲೂಟಿ ಮಾಡಿದ ಮತ್ತು ಜಾತಿ ರಾಜಕಾರಣದ ಮೂಲಕ ದ್ವೇಷ ಬಿತ್ತಿದ ವಿರೋಧ ಪಕ್ಷಗಳಿಗೆ ಈ ಜನಾದೇಶವು ದಿಟ್ಟ ಪ್ರತ್ಯುತ್ತರ ನೀಡಿದೆ ಎಂದು ಅವರು ಬಣ್ಣಿಸಿದ್ದಾರೆ.

ವಾರ್ತಾ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಪ್ರಚಂಡ ಗೆಲುವಿಗೆ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪರಿಶ್ರಮವೇ ಕಾರಣ ಎಂದರು. ನವಭಾರತ ಮತ್ತು ನವಉತ್ತರಪ್ರದೇಶ ಸೃಷ್ಟಿಗೆ ಈ ಫಲಿತಾಂಶ ಕಾರಣವಾಗಲಿದೆ.

ಉತ್ತರಪ್ರದೇಶದ ಫಲಿತಾಂಶವು ನಾನು ಮತ್ತೊಂದು ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ನೆರವಾಗಲಿದೆ ಎಂದು ಅವರು ತಿಳಿಸಿದರು. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿದ್ದವು, ಆದರೆ ಬಿಜೆಪಿ ಜಾತಿ, ಮತ, ಪಂಥ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ವ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದೆವು ಇದಕ್ಕಾಗಿ ಬಿಜೆಪಿ ಪ್ರಚಂಡ ಜನಾದೇಶ ಲಭಿಸಿದೆ ಎಂದು ಯೋಗಿ ಸಂದರ್ಶನದಲ್ಲಿ ಹೇಳಿದರು.

Facebook Comments