ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಯುಕೆ ಅರ್ಕ ಅವಾರ್ಡ್ಸ್ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.28- ವಸಂತನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ವಿಶ್ವವಿಖ್ಯಾತ ಅಧ್ಯಾತ್ಮ ಗುರು, ಮೈಸೂರಿನ ಅರ್ಕಧಾಮ ಸಂಸ್ಥಾಪಕರಾದ ಯೋಗಿ ಶ್ರೀನಿವಾಸ ಅರ್ಕ ಅವರ ಜನ್ಮದಿನಾಚರಣೆ ನಡೆಯಿತ್ತು.

ಈ ಶುಭ ಸಂದರ್ಭವನ್ನು ಅರ್ಥಪೂರ್ಣವಾಗಿಸಲು ಮಹಾಗುರು ಅರ್ಕ ಅವರು ನಾಡಿನ ಹಲವು ಕ್ಷೇತ್ರದ ಸಾಧಕರನ್ನು ಗುರುತಿಸಿ, ತಮ್ಮ ಯು.ಕೆಯ ಸಾಮಾಜಿಕ ಸಂಸ್ಥೆಯ ವತಿಯಿಂದ ಅರ್ಕ ಯುಕೆ ಅವಾರ್ಡ್ಸ್ ನೀಡಿ ಸಾಧಕರನ್ನು ಗೌರವ ಸಲ್ಲಿಸಲಾಯಿತು. ಸ್ಥಳೀಯ ಭಾಷೆಗಳಿಗೆ ವೇದಗಳನ್ನು ತರ್ಜುಮೆ ಮಾಡಿ ಸಾಮಾನ್ಯರ ಮನೆ ಮನಗಳಿಗೆ ತಲುಪಿಸುತ್ತಿರುವ ಪದ್ಮಶ್ರೀ ಪುರಸ್ಕೃತ ಡಾ.ಆರ್.ಎಲ್‌.ಕಶ್ಯಪ್, ಹಿರಿಯ ಪತ್ರಕರ್ತರಾದ ಶ್ರೀ ವೆಂಕಟನಾರಾಯಣ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಹಿರಿಯ ಸರ್ಜನ್ ಆಗಿ ಸೇವೆಸಲ್ಲಿಸಿದ,

ಈಗ ಬಸವನಗುಡಿಯ ಅಬಲಾಶ್ರಮದ ಅಧ್ಯಕ್ಷರಾಗಿರುವ ಡಾ.ವಿಜಯಲಕ್ಷ್ಮಿ ದೇಶಮಾನೆ, ನಾಡಿನ ಹಿರಿಯ ಆಯುರ್ವೇದ ವೈದ್ಯರಾದ ಡಾ. ವಿಶ್ವನಾಥ್ ಹಿರೇಮಠ್, ನಾಡಿನ ಸಂಸ್ಕೃತಿ ಸದಾಚಾರವನ್ನು ದೇಶವಿದೇಶಗಳಲ್ಲಿ ಪ್ರಸಾರ ಮಾಡುತ್ತಿರುವ ಕೋಟೆ ವೆಂಕಟರಮಣ ದೇಗುಲದ ಅರ್ಚಕರಾದ ವಿದ್ವಾನ್ ವಾಸುದೇವ ಭಟ್ಟರ್ ಅವರಿಗೆ ಯು.ಕೆ 2021 ಅವಾರ್ಡ್ಸ್ ಪ್ರದಾ‌ನ ಮಾಡಿ ಗೌರವಿಸಲಾಯ್ತು.

ಕಾರ್ಯಕ್ರಮಕ್ಕೆ ರಾಜವಂಶಸ್ಥರಾದ ಜಯಪಾಲಾಕ್ಷಿ ಅಮ್ಮ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಕೂಡಾ ಆಗಮಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

Facebook Comments