ಭಜರಂಗಿ – 2 ಚಿತ್ರದಲ್ಲಿ ತಮಿಳು ಹಾಸ್ಯ ನಟ ಯೋಗಿ ಬಾಬು

ಈ ಸುದ್ದಿಯನ್ನು ಶೇರ್ ಮಾಡಿ

ತಮಿಳು ಚಿತ್ರರಂಗದ ಸ್ಟಾರ್ ನಟರುಗಳಾದ ರಜನಿಕಾಂತ್, ವಿಜಯï, ಅಜಿತ್‍ರ ಚಿತ್ರಗಳಲ್ಲಿ ಕಾಮನ್ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಯೋಗಿಬಾಬು ಅವರು ಈಗ ಸ್ಯಾಂಡಲ್‍ವುಡ್‍ನಲ್ಲೂ ನಟಿಸಲು ಹೊರಟಿದ್ದಾರೆ.

ಕೆಲ ದಿನಗಳಿಂದ ಬೆಂಗಳೂರಿನಲ್ಲೇ ನೆಲೆಯೂರಿರುವ ಯೋಗಿಬಾಬು ಚಂದನವನದ ತಾರೆಗಳಾದ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ದುನಿಯಾ ವಿಜಯ್ ಅವರನ್ನು ಭೇಟಿಯಾಗಿದ್ದರು.

ಆಗಲೇ ಅವರು ಈ ಮೂವರು ನಾಯಕರು ನಟಿಸುತ್ತಿರುವ ಯಾವುದಾದರೂ ಚಿತ್ರವೊಂದರಲ್ಲಿ ನಟಿಸುತ್ತಾರೆ ಎಂಬ ಸಂಶಯ ಮೂಡಿತ್ತು. ಅದು ಈಗ ನಿಜವಾಗಿದ್ದು , ಯೋಗಿಬಾಬು ಅವರು ಹರ್ಷ ನಿರ್ದೇಶಿಸಿ , ಶಿವರಾಜ್ಕುರ್ಮಾ ನಟಿಸುತ್ತಿರುವ ಬಹು ಅದ್ಧೂರಿ ಚಿತ್ರ ಭಜರಂಗಿ- 2 ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣವು ಮುಗಿದಿದ್ದು , ಕೊನೆಯ ಘಳಿಗೆಯಲ್ಲಿ ತಂಡವನ್ನು ಕೂಡಿ ಕೊಂಡಿರುವ ಯೋಗಿ ಬಾಬು ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಕುತೂಹಲವು ಹೆಚ್ಚಾಗಿದೆ.

ಭಜರಂಗಿ ಚಿತ್ರದ ಮುಂದುವರೆದ ಭಾಗವಾಗಿ ರುವ ಭಜರಂಗಿ- 2 ಚಿತ್ರ ಜಯಣ್ಣ ಫಿಲಂಸ್ ಅಡಿ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ನಂತರ ಯೋಗಿ ಬಾಬು ಅವರು ಮತ್ತಷ್ಟು ಕನ್ನಡ ಚಿತ್ರರಂಗದಲ್ಲಿ ಮಿಂಚುವಂತಾಗಲಿ.

Facebook Comments

Sri Raghav

Admin