ಹನುಮನಿಗೆ 2.5 ಕೆಜಿ ಚಿನ್ನದ ಕಿರೀಟ ಸಮರ್ಪಿಸಿದ ಯೋಗಿ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜು.15- ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2.5 ಕೆಜಿ ತೂಕದ ಚಿನ್ನದ ಕಿರೀಟವನ್ನು ಹನುಮ ದೇವರಿಗೆ ಸಮರ್ಪಿಸಿದ್ದಾರೆ.

ಸ್ವಾಮಿ ಕಲ್ಯಾಣ್ ದೇವ್ ಅವರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಗಂಗಾನದಿಯ ದಡದಲ್ಲಿರುವ ಪವಿತ್ರ ಸ್ಥಳ ಶುಕ್ರತಳ್‍ದಲ್ಲಿರುವ 75 ಅಡಿ ಉದ್ದದ ಹನುಮನ ಪ್ರತಿಮೆಗೆ 2.5 ಕೆಜಿ ತೂಕದ ಚಿನ್ನದ ಕಿರೀಟವನ್ನು ಸಮರ್ಪಿಸಿದರು.

ಅಲ್ಲದೆ ಶುಕ್ರತಳದ ಅಭಿವೃದ್ಧಿಗಾಗಿ ಯೋಗಿ ಆದಿತ್ಯನಾಥ್ 10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.  ಕಳೆದ ರಾಜ್ಯಸಭಾ ಚುನಾವಣೆಯ ಪ್ರಚಾರದ ವೇಳೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಹನುಮಾನ್ ಒಬ್ಬ ದಲಿತ ಎಂದು ಹೇಳುವ ಮೂಲಕ ಭಾರೀ ಪ್ರಚಾರ ಪಡೆದುಕೊಂಡಿದ್ದರು.

ಅಲ್ವರ್ ಜಿಲ್ಲೆಯ ಮಲಖೇಡದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಜರಂಗಿಯು ಒಬ್ಬ ದಲಿತ, ಅರಣ್ಯವಾಸಿಯಾಗಿದ್ದು, ಬಜರಂಗಿಬಲಿಯು ಭಾರತದ ದಕ್ಷಿಣ, ಉತ್ತರ, ಪಶ್ಚಿಮ , ಪೂರ್ವದ ಎಲ್ಲ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದನು ಎಂದು ಹೇಳಿದ್ದರು.

Facebook Comments