ಜಪಾನ್ ಪ್ರಧಾನಿ ಅಬೆ ರಾಜೀನಾಮೆ : ಉತ್ತರಾಧಿಕಾರಿ ಸುಗ ಆಯ್ಕೆಗೆ ಹಾದಿ ಸುಗಮ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ,ಸೆ.16-ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಇಂದುರಾಜೀನಾಮೆ ನೀಡಿದ್ದು, ಮುಂದಿನ ಪ್ರಧಾನಿಯಾಗಿಆಡಳತರೂಢ ಲಿಬೆರಲ್‍ಡೆಮೊಕ್ರಾಟಿಕ್ ಪಾರ್ಟಿ(ಎಲ್‍ಡಿಪಿ)ಯ ಹಿರಿಯಧುರೀಣ ಯೊಶಿಹಿಡೆ ಸುಗ ಆಯ್ಕೆಗೆ ಹಾದಿ ಸುಗಮವಾಗಿದೆ.  ಅನಾರೋಗ್ಯದಕಾರಣರಾಜೀನಾಮೆ ನೀಡಿರುವುದಾಗಿ ಅಬೆ ತಿಳಿಸಿದ್ದಾರೆ.

ತಾವು ಮತ್ತುತಮ್ಮ ಸರ್ಕಾರರಾಜೀನಾಮೆ ನೀಡಿದ್ದು, ಮುಂದಿನ ಉತ್ತರಾಧಿಕಾರಿ ನೇತೃತ್ವದ ಸರ್ಕಾರದಆಯ್ಕೆಗೆ ಅನುವು ಮಾಡಿಕೊಟ್ಟಿರುವುದಾಗಿಅವರು ಹೇಳಿದ್ದಾರೆ. ಎಲ್‍ಡಿಪಿಯ ಹೊಸ ಮುಖ್ಯಸ್ಥರಾಗಿ ಸುಗ ಆವರು ಸೋಮವಾರ ಆಯ್ಕೆಯಾಗಿದ್ದಾರೆ. ಇದರೊಂದಿಗೆದೇಶದ ಮುಂದಿನ ಪ್ರಧಾನಮಂತ್ರಿಗಾಗಿಇಂದು ನಡೆಯುವ ಸಂಸತ್‍ ಚುನಾವಣೆಯಲ್ಲಿ ಇವರು ಜಯಸಾಧಿಸುವುದು ನಿಶ್ಚಿತವಾಗಿದೆ.

ಹಾಲಿ ಪ್ರಧಾನಿ ಶಿಂಜೋ ಅಬೆ ಅವರಉತ್ತರಾಧಿಕಾರಿಯಆಯ್ಕೆಗಾಗಿ ಸೋಮವಾರ ನಡೆದಎಲ್‍ಡಿಪಿ ಚುನಾವಣೆಯಲ್ಲಿ ಸುಗ 377 ಮತಗಳನ್ನು ಪಡೆದರುಪಕ್ಷದ ನಾಯಕತ್ವ ವಹಿಸಲು ಆಕಾಂಕ್ಷಿತರಾಗಿ ಸ್ಪರ್ಧಿಸಿದ್ದ ಇಬ್ಬರುಇತರ ಅಭ್ಯರ್ಥಿಗಳು ಒಟ್ಟು 157 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪ್ರಸ್ತುತ ಪ್ರಧಾನಿ ಶಿಬೆ ಸರ್ಕಾರದಲ್ಲಿ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿರುವ ಸುಗ ಪ್ರಭಾವಿ ನಾಯಕರಾಗಿದ್ದಾರೆ. ಇಂದುನಡೆಯಲಿರುವ ಸಂಸತ್‍ಚುನಾವಣೆಯಲ್ಲಿಇವರ ಗೆಲುವು ಸಾಧಿಸುವುದುಖಚಿತವಾಗಿದೆ.  ಅನಾರೋಗ್ಯ ಸಮಸ್ಯೆಗಳಿಂದಾಗಿ ತಾವುರಾಜೀನಾಮೆ ನೀಡುವುದಾಗಿ ಪ್ರಧಾನಿ ಶಿಬೆ ಕಳೆದ ತಿಂಗಳು ಪ್ರಕಟಿಸಿದ್ದರು.

Facebook Comments