ಜಪಾನ್ ಪ್ರಧಾನಿಯಾಗಿ ಯೊಶಿಹಿಡೆ ಸುಗ ಆಯ್ಕೆ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಸೆ.14- ಉದಯ ರವಿ ನಾಡು ಜಪಾನ್‍ನ ಮುಂದಿನ ಪ್ರಧಾನಮಂತ್ರಿಯಾಗಿ ಆಡಳಿತಾರೂಢ ಲಿಬೆರಲ್ ಡೆಮೊಕ್ರಾಟಿಕ್ ಪಾರ್ಟಿ(ಎಲ್‍ಡಿಪಿ)ಯ ಹಿರಿಯಧುರೀಣ ಯೊಶಿಹಿಡೆ ಸುಗ ಆಯ್ಕೆಯಾಗುವುದು ಖಚಿತವಾಗಿದೆ.

ಎಲ್‍ಡಿಪಿಯ ಹೊಸ ಮುಖ್ಯಸ್ಥರಾಗಿ ಸುಗ ಆವರು ಇಂದು ಆಯ್ಕೆಯಾಗಿದ್ದಾರೆ. ಇದರೊಂದಿಗೆ ದೇಶದ ಮುಂದಿನ ಪ್ರಧಾನಮಂತ್ರಿಗಾಗಿ ಬುಧವಾರ ನಡೆಯುವ ಸಂಸತ್ ಚುನಾವಣೆಯಲ್ಲಿ ಇವರು ಜಯಸಾಸುವುದು ನಿಶ್ಚಿತವಾಗಿದೆ.

ಹಾಲಿ ಪ್ರಧಾನಿ ಶಿಂಜೋ ಅಬೆ ಅವರ ಉತ್ತರಾಕಾರಿಯ ಆಯ್ಕೆಗಾಗಿ ಇಂದು ನಡೆದ ಎಲ್‍ಡಿಪಿ ಚುನಾವಣೆಯಲ್ಲಿ ಸುಗ 377 ಮತಗಳನ್ನು ಪಡೆದರುಪಕ್ಷದ ನಾಯಕತ್ವ ವಹಿಸಲು ಆಕಾಂಕ್ಷಿತರಾಗಿ ಸ್ರ್ಪಸಿದ್ದ ಇಬ್ಬರು ಇತರ ಅಭ್ಯರ್ಥಿಗಳು ಒಟ್ಟು 157 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪ್ರಸ್ತುತ ಪ್ರಧಾನಿ ಶಿಬೆ ಸರ್ಕಾರದಲ್ಲಿ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿರುವ ಸುಗ ಪ್ರಭಾವಿ ನಾಯಕರಾಗಿದ್ದಾರೆ. ಬುಧವಾರ ನಡೆಯಲಿರುವ ಸಂಸತ್‍ಚುನಾವಣೆಯಲ್ಲಿಇವರ ಗೆಲುವು ಸಾಸುವುದುಖಚಿತವಾಗಿದೆ. ಅನಾರೋಗ್ಯ ಸಮಸ್ಯೆಗಳಿಂದಾಗಿ ತಾವುರಾಜೀನಾಮೆ ನೀಡುವುದಾಗಿ ಪ್ರಧಾನಿ ಶಿಬೆ ಕಳೆದ ತಿಂಗಳು ಪ್ರಕಟಿಸಿದ್ದರು.

Facebook Comments

Sri Raghav

Admin