ಮಕ್ಕಳ ಮೇಲೆ ಕೊರೋನಾ ವಕ್ರದೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ಹಿರಿಯ ಜೀವಗಳಿಗೆ ಮಾರಿಯಾಗಿದ್ದ ಕೊರೋನಾ ಮಹಾಮಾರಿ ಚಿಕ್ಕ ಮಕ್ಕಳ ಮೇಲೂ ತನ್ನ ವಕ್ರ ದೃಷ್ಟಿ ಬೀರತೊಡಗಿದೆ.  ಇತ್ತೀಚೆಗೆ 10 ವರ್ಷದೊಳಗಿನ ಮಕ್ಕಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ನಗರದ ಜನತೆ ತಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇಡುವ ಅವಶ್ಯಕತೆ ಇದೆ.

ಕಳೆದ ಒಂದು ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಪಾಸಿಟಿವ್ ಆಗಿದೆ. ಜೂನ್ 27ರಂದು 14 ಮಕ್ಕಳಿಗೆ, 28ರಂದು 23 ಮಕ್ಕಳಿಗೆ, 30ರಂದು 20 ಮಕ್ಕಳಿಗೆ, ಜುಲೈ 1ರಂದು 19 ಮಕ್ಕಳಿಗೆ ಹಾಗೂ ನಿನ್ನೆ ಬರೋಬ್ಬರಿ 31 ಮಕ್ಕಳಲ್ಲಿ ಹೆಮ್ಮಾರಿ ಕಾಣಿಸಿಕೊಂಡಿದೆ.

ಇದುವರೆಗೂ ಹಿರಿಯರನ್ನು ಕಾಡುತ್ತಿದ್ದ ಮಹಾಮಾರಿ ಮಕ್ಕಳ ಮೇಲೆ ತನ್ನ ವಕ್ರದೃಷ್ಠಿ ಬೀರಿರುವುದರಿಂದ ಅಕ್ಟೋಬರ್‍ವರೆಗೂ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು ಅನಿವಾರ್ಯವಾಗಿದೆ. ಮನೆ ಬಿಟ್ಟು ಎಲ್ಲೂ ಹೋಗದ ಮಕ್ಕಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

Facebook Comments