ಪ್ರಧಾನಿ ಭದ್ರತೆಗೆ 45 ವರ್ಷದ ದಾಟದ ಪೊಲೀಸ್ ಸಿಬ್ಬಂದಿ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.1-ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದರಿಂದ ಅವರಿಗೆ ಭದ್ರತೆ ಒದಗಿಸಲು 45 ವರ್ಷದ ದಾಟದ ಹಾಗೂ ಕೊರೊನಾ ನೆಗಿಟಿವ್ ದೃಢಪಟ್ಟ ಪೊಲೀಸ್ ಸಿಬ್ಬಂದಿಗಳನ್ನು ಮಾತ್ರ ನೇಮಿಸಲಾಗುತ್ತಿದೆ.

ಭೂಮಿ ಪೂಜೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸರ್ಕಾರ 3,500 ಪೆÇಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದೆ. ಅಯೋಧ್ಯೆಯಲ್ಲಿ ಈಗಾಗಲೇ ಇರುವ 20 ಕಂಪನಿಗಳೊಂದಿಗೆ ಒಟ್ಟು 40 ಕಂಪನಿಗಳನ್ನು (ಪ್ರಾಂತೀಯ ಸಶಸ್ತ್ರ ಸಂರಚನಾ) ಪಿಎಸಿಯನ್ನು ನಿಯೋಜಿಸಲಾಗುತ್ತಿದೆ.

ಅಯೋಧ್ಯೆಯಲ್ಲಿ ಭದ್ರತೆಗಾಗಿ ನಿಯೋಜಿಸಲಿರುವ ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷಿಸುವ ಪ್ರಕ್ರಿಯೆ ಈಗಾಗಲೇ ನಡೆಸಲಾಗುತ್ತಿದೆ.  ಕಾನೂನು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ ಮತ್ತು ಲಕ್ನೋ ವಲಯದ ಎಡಿಜಿ ಸತ್ಯ ನಾರಾಯಣ್ ಸಬತ್ ಅವರು ಭೂಮಿ ಪೂಜೆ ಕಾರ್ಯಕ್ರಮದ ಮುಂಚಿತವಾಗಿ ಅಯೋಧ್ಯೆಯಲ್ಲಿ ಯುಪಿ ಪೊಲೀಸ್ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.

ಭದ್ರತಾ ಕ್ರಮಗಳನ್ನು ನೋಡಿಕೊಳ್ಳಲು ಎಸ್‍ಎಸ್‍ಪಿ ದೀಪಕ್ ಕುಮಾರ್ ಮತ್ತು 8 ಪೆÇಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇಬ್ಬರು ಡಿಐಜಿ ಮಟ್ಟದ ಅಧಿಕಾರಿಗಳು ಅಯೋಧೆಯಲ್ಲಿ ನಿಯೋಜಿಸಲಾಗಿದೆ.

Facebook Comments

Sri Raghav

Admin