ಚಾಕುವಿನಿಂದ ಇರಿದು ಯುವಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಸೆ.11- ಯುವಕನನ್ನು ಮನಬಂದಂತೆ ಚಾಕುವಿನಿಂದ ಇರಿದು ಕೊಂದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮನುಕುಮಾರ್(25) ಕೊಲೆಯಾದ ಯುವಕ. ನೆರೆಮನೆಯ ರಾಜು ತನ್ನ ಸಹಚರರೊಂದಿಗೆ ಸೇರಿ ಮನುಕುಮಾರ್‍ನನ್ನು ಹತ್ಯೆ ಮಾಡಿ ಕೊಲೆ ಮಾಡಿದ್ದಾರೆ.

ನಗರ ಠಾಣೆ ವ್ಯಾಪ್ತಿಯ ಎನ್.ಆರ್.ಕಾಲೋನಿಯ ಮಾಜಿ ಶಾಸಕ ಬಿಜೆಪಿ ಮುಖಂಡರೊಬ್ಬರ ಮನೆ ಮುಂಭಾಗವೇ ತಡರಾತ್ರಿ 1 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಮನುಕುಮಾರ್ ನಿನ್ನೆ ಹುಟ್ಟಹಬ್ಬದ ನಿಮಿತ್ತ ನೆರೆಮನೆಯ ನಿವಾಸಿಗಳಾದ ರಾಜು ಮತ್ತಿತರರು ಬಂದು ಶುಭಾಷಯ ಹೇಳಿದ್ದಾರೆ. ಸ್ವಲ್ಪ ದೂರ ತೆರಳಿ ರಾಜು ಮತ್ತಿತರರು ಲೇವಡಿ ಮಾಡಿದ್ದಾರೆ. ಈ ವೇಳೆ ಮನುಕುಮಾರ್ ಹಾಗೂ ಇವರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಬಾಟಲಿಯಿಂದ ಮನುಕುಮಾರ್ ಮೇಲೆ ಹಲ್ಲೆ ಮಾಡಿ ಇರಿದಿದ್ದಾರೆ. ಸಹಾಯಕ್ಕಾಗಿ ಮನುಕುಮಾರ್ ಕೂಗಿಕೊಂಡಾಗ ನೆರೆಹೊರೆಯವರು ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿದ್ದ ಮನುಕುಮಾರ್‍ನನ್ನು ಸ್ಥಳೀಯರು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ನಗರ ಠಾಣೆ ಸಬ್‍ಇನ್‍ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಖೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ, ನಗರ ವೃತ್ತ ನಿರೀಕ್ಷಕ ನವೀತ್ ಭೇಟಿ ನೀಡಿದ್ದಾರೆ.

ವಿಶೇಷ ತಂಡ ರಚನೆ: ಎಸ್‍ಪಿ ಕೋನವಂಶಿ ಕೃಷ್ಣ ಅವರು ಈ ಸಂಜೆ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಆತನ ಸ್ನೇಹಿತರೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ವೃತ್ತ ನಿರೀಕ್ಷಕ ನವೀನ್, ಸಬ್‍ಇನ್‍ಸ್ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅದಷ್ಟು ಶೀಘ್ರ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.

Facebook Comments