ಎದೆ ನಡುಗಿಸೋ ವಿಡಿಯೋ, ಟಿಕ್ ‍ಟಾಕ್ ಮಾಡೋರೇ ತಪ್ಪದೆ ಈ ವಿಡಿಯೋ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜೂ.18- ಟಿಕ್‍ಟಾಕ್ ಮಾಡಲು ಹೋಗಿ ಯುವಕನೋರ್ವ ತನ್ನ ಜೀವನವನ್ನೇ ನರಕ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ ನಡೆದಿದೆ.

ಆರ್ಕೆಸ್ಟ್ರಾವೊಂದರಲ್ಲಿ ಡ್ಯಾನ್ಸರ್ ಕಂ ಸಿಂಗರ್ ಆಗಿರುವ ಕುಮಾರ್ ಎಂಬ ಯುವಕ ವಿಭಿನ್ನವಾಗಿ ಗಮನ ಸೆಳೆಯಲು ರಿವರ್ಸ್ ಜಂಪ್ ಮಾಡಲು ಹೋಗಿ ಮೈ ಮೂಳೆ ಮುರಿದುಕೊಂಡಿದ್ದಾನೆ.

ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡುವಾಗ ಸಾಹಸದ ಬ್ಯಾಕ್ ಜಂಪ್ ಮಾಡಲು ಹೋದಾಗ ಕತ್ತು, ಬೆನ್ನು, ಕಾಳಿನ ಮೂಳೆಯನ್ನು ಮುರಿದುಕೊಂಡು ಆಸ್ಪತ್ರೆ ಪಾಲಾಗಿದ್ದಾನೆ.

ಟಿಕ್‍ಟಾಕ್ ಗೀಳಿಗೆ ಬಿದ್ದು ಹೆಚ್ಚಿನ ಲೈಕ್ ಪಡೆಯುವುದಕ್ಕಾಗಿ ಈ ರೀತಿಯ ಸಾಹಸ ಮಾಡಿ ಸ್ಪೈನಲ್ ಕಾರ್ಡ್ ಮುರಿತಕ್ಕೊಳಗಾಗಿದ್ದಾನೆ. ಸದ್ಯ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಟಿಕ್‍ಟಾಕ್‍ಗೆ ಬಹು ಆಕರ್ಷಿತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಾವು ಮಾಡಿರುವ ವಿಡಿಯೋವನ್ನು ಹರಿಬಿಡುತ್ತಾರೆ. ಈ ಭರದಲ್ಲಿ ವಿವಿಧ ರೀತಿಯ ಸಾಹಸಗಳನ್ನು ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಿರುವ ಪ್ರಕರಣಗಳು ದಿನದಿಂದ ದಿನ ಹೆಚ್ಚಾಗುತ್ತಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin