ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಸ್ನೇಹಿತರ ಹೊಡೆದಾಟ, ಗೆಳೆಯನಿಗೆ ಚಾಕು ಇರಿತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.25- ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.ಹೇಮಂತ್(25) ಕೊಲೆಯಾದ ಯುವಕ. ಹೇಮಂತ್ ತನ್ನ ಗೆಳೆಯ ನಿಖಿಲ್‍ನೊಂದಿಗೆ ಟೀ ಕುಡಿಯಲು ಅಂಗಡಿಗೆ ಹೋಗಿದ್ದಾರೆ. ಈ ವೇಳೆ ನಿಖಿಲ್‍ನ ಸ್ನೇಹಿತ ಆಗಮಿಸಿದ್ದು, ಇಬ್ಬರ ನಡುವೆ ಜಗಳ ಮಾಡಿಕೊಂಡು ಹೊಡೆದಾಟಕ್ಕಿಳಿದಿದ್ದಾರೆ.

ಈ ವೇಳೆ ನಿಖಿಲ್‍ನ ಸ್ನೇಹಿತ ಅಕಸ್ಮಾತಾಗಿ ಹೇಮಂತ್‍ಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರೊಳಗೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಖಿಲ್ ಮತ್ತು 18 ವರ್ಷದ ಆತನ ಸ್ನೇಹಿತನೊಂದಿಗೆ ಕಳೆದ ನ.17ರಂದು ಪಾರ್ಟಿಯೊಂದರಲ್ಲಿ ಕ್ಷುಲ್ಲಕ ವಿಷಯಕ್ಕಾಗಿ ಜಗಳ ನಡೆದಿತ್ತು.

ಕುಡಿದ ಅಮಲಿನಲ್ಲಿ ಆರೋಪಿ ನಿಖಿಲ್ ಮನೆ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದ. ಇದನ್ನು ನಿಖಿಲ್ ಆಕ್ಷೇಪಿಸಿ ಜಗಳವಾಡಿದ್ದ. ಇದಕ್ಕಾಗಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಆರೋಪಿ ಸಮಯಕ್ಕಾಗಿ ಹೊಂಚು ಹಾಕಿದ್ದು, ನಿನ್ನೆ ಟೀ ಸ್ಟಾಲ್‍ಗೆ ತನ್ನ ಮತ್ತೊಬ್ಬ ಗೆಳೆಯ ಹೇಮಂತ್‍ನೊಂದಿಗೆ ನಿಖಿಲ್ ಬಂದಾಗ ಅವನ ಜೊತೆ ಹೊಡೆದಾಟಕ್ಕಿಳಿದಿದ್ದಾನೆ.

ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ನಿಖಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments